Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೆ .29ರಂದು ಕರ್ನಾಟಕ ಬಂದ್‌- ಕನ್ನಡ ಪರ ಸಂಘಟನೆ ಕರೆ

ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ತೀವ್ರವಾಗಿದ್ದು, ಬೆಂಗಳೂರು ಬಂದ್ ಬೆನ್ನಲ್ಲೇ ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್‌ ಗೆ ಕನ್ನಡ ಪರ ಸಂಘಟನೆಗಳು ಕರೆನೀಡಿದೆ. ರೈತ ಪರ ಸೇರಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ.

ಶುಕ್ರವಾರ ನಡೆಯಲಿರುವ ಬಂದ್ ಮಹತ್ವದ ಹಾಗೂ ಗಂಭೀರ ಪ್ರತಿಭಟನೆಯಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸೆ. 29ರ ಕರ್ನಾಟಕ ಬಂದ್‌ಗೆ ಎಲ್ಲ ರೈತ ಸಂಘಗಳು ಬೆಂಬಲ ನೀಡುತ್ತವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.