Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ – ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ

ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ರೈಲಿಗೆ ವಿಶೇಷ ರೈಲುಗಳಿಗೆ ತಾತ್ಕಾಲಿಕವಾಗಿ 3 ಸ್ಲೀಪರ್ ಕ್ಲಾಸ್ ಕೋಚ್ ಗಳು ಮತ್ತು ಒಂದು ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್ ಗಳನ್ನು ಪ್ರಯಾಣಿಕರ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ ಈ ಸೇವೆಯನ್ನು ಒದಗಿಸಲಾಗುವುದು ಎಂದು ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2023ರ ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್‌ನಿಂದ ಹೊರಡುವ ರೈಲು (ನಂಬ್ರ 01165) ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ವಿಶೇಷ ರೈಲಿಗೆ 3 ಸ್ಲೀಪರ್ ಕ್ಲಾಸ್ ಕೋಚ್ ಗಳು ಮತ್ತು ಒಂದು ಸಾಮಾನ್ಯ ಎರಡನೆ ದರ್ಜೆಯ ಸಿಟ್ಟಿಂಗ್‌ ಕೋಚ್‌ ಗಳನ್ನುಸೇರ್ಪಡೆಗೊಳಿಸಲಾಗುವುದು.

ಸೆ.30 ಮತ್ತು ಅ.1ರಂದು ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಮಂಗಳೂರು ಜಂಕ್ಷನ್ – ಮುಂಬೈ ಲೋಕಮಾನ್ಯ ತಿಲಕ್ ವಿಶೇಷ ರೈಲಿಗೆ – (ನಂಬ್ರ 01161) 3 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು ಒಂದು ಸಾಮಾನ್ಯ ಎರಡನೇ ದರ್ಜೆಯ ಸಿಟ್ಟಿಂಗ್ ಕೋಚ್ ಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.