ಸೈಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಹೃದಯಾಘಾತದಿಂದ ನಿಧನ
ಬೆಂಗಳೂರು: ಫಿಟ್ನೆಸ್ ತರಬೇತುದಾರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಅನೀಲ್ ಕಡ್ಸೂರ್( 45 ) ಶುಕ್ರವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅನೀಲ್ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪ್ರತಿದಿನಿ ಅನಿಲ್ 100 ಕಿ.ಮೀ ಸೈಕ್ಲಿಂಗ್ ಮಾಡುತ್ತಿದ್ದರು. 100 ಕ್ಕೂ ಹೆಚ್ಚು ಸೈಕ್ಲಿಂಗ್ನ್ನು ಪೂರ್ಣಗೊಳಿಸುವ ಮೂಲಕ ಸಾಧನೆ ಮಾಡಿದ್ದರು. ಅಲ್ಲದೇ ಸೈಕ್ಲಿಂಗ್ ಮಾಡುವವರಿಗೆ ಹುರುಪು ತುಂಬುತ್ತಿದ್ದುರು. 42 ತಿಂಗಳು ನಿರಂತರವಾಗಿ, ಸೆಂಚ್ಯೂರಿ ರೇಡ್ ಮಾಡುವ ಮೂಲಕ ಎಲ್ಲಾರ ಗಮನ ಸೆಳೆದಿದ್ದರು. ಉತ್ತಮ ಹಾಗೂ ಕಠಿಣ ಸೈಕ್ಲಿಂಗ್ ಪಟುಗಳಾಗಲು ಸಲಹೆ , ಪೋತ್ಸಾಹ ಕೊಡುತ್ತಿದ್ದರು