Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸೈಮಾದಲ್ಲಿ 10 ಅವಾರ್ಡ್ ಗೆದ್ದ ಕಾಂತಾರ….ದೈವ ನರ್ತಕರು, ಅಪ್ಪು ಸರ್ ಗೆ ಈ ಯಶಸ್ಸು ಸಮರ್ಪಣೆ ಎಂದ ರಿಷಬ್​ ಶೆಟ್ಟಿ

ಬೆಂಗಳೂರು: ಸೈಮಾ ಅವಾರ್ಡ್ ನಲ್ಲಿ ಕಾಂತಾರ ಬರೋಬ್ಬರಿ 10 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ನಟ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ‘ದೈವ ನರ್ತಕರು, ಅಪ್ಪು ಸರ್ ಮತ್ತು ಕನ್ನಡಿಗರಿಗೆ ಈ ಯಶಸ್ಸು ಸಮರ್ಪಣೆ’ ಎಂದ ಅವರು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು. ಅದರಲ್ಲಿ ಬರೋಬ್ಬರಿ 10 ವಿಭಾಗಗಳಲ್ಲಿ ಕಾಂತಾರ ಸಿನಿಮಾಗೆ ಅವಾರ್ಡ್​ ಸಿಕ್ಕಿರುವುದು ವಿಶೇಷ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಸಂಗೀತ ನಿರ್ದೇಶನ ಮುಂತಾದ ವಿಭಾಗಗಳಲ್ಲಿ ‘ಕಾಂತಾರ’ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.

‘ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ ಕಾಂತಾರ ಸಿನಿಮಾದ ಯಶಸ್ಸಿಗೆ ಕಾರಣ. ಸೈಮಾ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ, ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮನ ತುಂಬಿ ಬಂದಿದೆ. ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆಯೇ ಇರಲಿ. ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಈ ಎಲ್ಲಾ ಯಶಸ್ಸು ಸಮರ್ಪಣೆ’ ಎಂದು ರಿಷಬ್​ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ.