ಸೊಸೆ ಗಂಡು ಮಗು ಹೆರಲಿಲ್ಲವೆಂದು 2 ತಿಂಗಳ ಮೊಮ್ಮಗಳ ಕತ್ತು ಹಿಸುಕಿ ಕೊಂದ ಅತ್ತೆಮಾವ
ಬಿಹಾರ: ಮೊಮ್ಮಗನ ಬಯಕೆಯಿಂದ , ಮಗುವಿನ ಅಜ್ಜ ಅಜ್ಜಿ ಎರಡು ತಿಂಗಳ ಮೊಮ್ಮಗಳನ್ನು ಕತ್ತು ಹಿಸುಕಿ ಕೊಂದ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಸೊಸೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಅಸಮಾಧಾನಗೊಂಡಿದ್ದಅತ್ತೆ ಮಾವ ಹೆಣ್ಣು ಹಸುಳೆಯನ್ನು ಕೊಂದಿದ್ದು, ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಹತೌರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮ ಸೊಹಿಜನ್ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಸೊಹಿಜನ್ ಗ್ರಾಮದ ನಿವಾಸಿಯಾದ ಅಶೋಕ್ ಓಜಾ ಅವರ ಪುತ್ರ ಧೀರಜ್ ಓಜಾ ಎಂಬಾತ ಕಟ್ರಾದ ಜಾಜುವಾರ್_ನ ಕೋಮಲ್ ಕುಮಾರಿಯನ್ನು ವಿವಾಹವಾಗಿದ್ದ. ಈಕೆಯ ಅತ್ತೆ ಮಾವ ಕುಟುಂಬದ ಮೊದಲ ಮಗುವು ಗಂಡಾಗಿರಬೇಕೆಂದು ಬಯಸಿದ್ದರು. ಆದರೆ ಕೋಮಲ್ ಗೆ ಹೆಣ್ಣು ಮಗು ಜನಿಸಿದ್ದು, ಇದರಿಂದ ಕುಪಿತಗೊಂಡಿದ್ದರು.
ಅತ್ತೆ ಸರೋಜದೇವಿ ಮಾವ ಅಶೋಕ್ ಓಜಾ ಹಾಗೂ ಇತರ ಕುಟುಂಬ ಸದಸ್ಯರ ಸಹಾಯದಿಂದ ಹೆಣ್ಣು ಹಸುಳೆಯನ್ನು ಕೊಂದು ಅದರ ಶವವನ್ನು ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದರು.
ಮಗು ಕಾಣಿಸದಾದಾಗ, ತಾಯಿಯ ನಿರಂತರ ಹುಡುಕಾಡಿದ್ದು, ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಮಗು ಕೊಂದ ವಿಚಾರ ಬೆಳಕಿಗೆ ಬಂದಿದೆ.
ಆರೋಪಿಗಳಾದ ಸರೋಜದೇವಿ, ಅಶೋಕ್ ಓಜಾನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ತಿಳಿಸಿದ್ದು, ದೂರಿನಲ್ಲಿ ಕೋಮಲ್ ಅವರಿಗೆ ಅತ್ತೆ ಸರೋಜದೇವಿ ಮತ್ತು ಮಾವ ಅಶೋಕ್ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಎಂದು ತಿಳಿದುಬಂದಿದೆ.