ಸೋನಿಯಾ ಗಾಂಧಿ ಮನೆಗೆ ಹೊಸ ಸದಸ್ಯೆಯ ಉಡುಗೊರೆ ಕೊಟ್ಟ ರಾಹುಲ್!
ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ವಿಶ್ವ ಪ್ರಾಣಿ ದಿನದ ಸಂದರ್ಭದಲ್ಲಿ ತಮ್ಮ ಹೊಸ ಕುಟುಂಬದ ಸದಸ್ಯರನ್ನು ಸೋನಿಯಾ ಗಾಂಧಿಗೆ ಉಡುಗೊರೆ ನೀಡುವ ಮೂಲಕ ಪರಿಚಯಿಸಿದ್ದಾರೆ.
ಗಾಂಧಿ ಕುಟುಂಬದ ಆ ಹೊಸ ಸದಸ್ಯೆ ಹೆಸರು ನೂರಿ. ಇದೊಂದು ಮುದ್ದಾಗಿರುವ ನಾಯಿಮರಿ. ಇದು ಸೋನಿಯಾ ಗಾಂಧಿಗೆ ಉಡುಗೊರೆ, ಇದು ಗೋವಾದಿಂದ ವಿಮಾನದಲ್ಲಿ ಇಲ್ಲಿಗೆ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ.
ಇನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಗೋವಾ ಪ್ರವಾಸವನ್ನು ಹಂಚಿಕೊಂಡಿದ್ದು, ಅಲ್ಲಿಂದ ನೂರಿಯನ್ನು ತೆಗೆದುಕೊಂಡು ಬಂದಿದ್ದು ಸೋನಿಯಾ ಗಾಂಧಿಯವರಿಗೆ ಉಡುಗೊರೆಯನ್ನು ನೀಡಿ ಅಚ್ಚರಿಗೊಳಿಸಿದ್ದಾರೆ.