ಸೌಜನ್ಯಳ 28 ಹುಟ್ಟುಹಬ್ಬ : ಸಮಾಧಿ ಬಳಿ ಮೂರ್ತಿ ಪ್ರತಿಷ್ಠಾಪನೆ
ಬೆಳ್ತಂಗಡಿ: 2012ರಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯಳ 28ನೇ ವರ್ಷದ ಹುಟ್ಟುಹಬ್ಬದಂದು ಆಕೆಯ ಸಮಾಧಿ ಬಳಿಯೇ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ.
ಸೌಜನ್ಯ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಳು. ಬುಧವಾರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ನಿರ್ಮಿಸಿದ ಅಂದಾಜು ಒಂದುವರೆ ಅಡಿ ಎತ್ತರದ ಕೂತಿರುವ ಶೈಲಿಯ ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಪ್ರಯುಕ್ತ 9 ತಂಡದ ಭಜನೋತ್ಸವ ನಡೆಯಿತು. ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಆ ಸಂದರ್ಭ ಹಲವು ಸುಳ್ಯ ಭಾಗದ ಒಕ್ಕಲಿಗ ನಾಯಕರು ಪಾಲ್ಗೊಂಡಿದ್ದರು. ಪ್ರಾರ್ಥನೆ ನೆರವೇರಿಸಿದ ಒಕ್ಕಲಿಗ ಹಾಗೂ ಬಿಜೆಪಿ ಮುಖಂಡರಾದ ದಕ್ಷಿಣ ಕನ್ನಡ ಜೇನು ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರು, ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡುವ ಕೆಲಸವಾಗಲಿ ಎಂದು ಪ್ರಾರ್ಥಿಸಿದರು.