ಸ್ವಾತಂತ್ರ್ಯದ ನಂತರ ಅಧಿಕಾರದಲ್ಲಿದ್ದವರು ನಮ್ಮ ಸಂಸ್ಕೃತಿ ನೋಡಿ ನಾಚಿಕೆ ಪಡುತ್ತಿದ್ದರು -ಮೋದಿ
ಗುವಾಹಟಿ: ಕಾಂಗ್ರೆಸ್ ಸರಕಾರಕ್ಕೆ ಧಾರ್ಮಿಕ ಸ್ಥಳಗಳ ಮಹತ್ವದ ಅರಿವಿಲ್ಲ ಹಾಗೂ ರಾಜಕೀಯ ಕಾರಣಗಳಿಗಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುವಾಹಟಿಯಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ವಿಶ್ವದಲ್ಲಿ ಯಾವುದೇ ದೇಶವು ತನ್ನ ಗತವನ್ನು ಅಳಿಸಿಹಾಕುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಆಡಳಿತಕ್ಕೆ ಬಂದ ಕೂಡಲೇ ವಿವಿಧ ಧಾರ್ಮಿಕ ಸ್ಥಳಗಳನ್ನು ಅಭಿವೃದ್ದಿ ಪಡಿಸಿದ್ದೇವೆ.
ಕಳೆದ 1 ವರ್ಷದಲ್ಲಿ ಕಾಶಿಗೆ 8.5 ಕೋಟಿ ಜನರು ಭೇಟಿ ನೀಡಿದ್ದಾರೆ. 5 ಕೋಟಿ ಜನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದಿದ್ದಾರೆ. 19 ಲಕ್ಷ ಜನ ಕೇದಾರಧಾಮಕ್ಕೆ ಹಾಗೂ ಕೇವಲ 12 ದಿನದಲ್ಲಿ 24 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪಾರಂಪರಿಕ ಕ್ಷೇತ್ರಗಳ ಪುನರುತ್ಥಾನದಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಿದೆ ಎಂದು ಹೇಳಿದರು.
ಮೋದಿಯವರ ಈ ಮಾತುಗಳು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ವ್ಯಂಗ್ಯ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಪ್ರತ್ಯುತ್ತರದ ರೀತಿ ಕಾಣುತ್ತಿತ್ತು.