— –ಹಡಪದ ಅಪ್ಪಣ್ಣ ಅವರ ವಚನ …!
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು.
ಭಕ್ತನೆಂತಿಪ್ಪ ಭವಿಯೆಂತಿಪ್ಪನೆಂದರೆ, ಆರೂ ಅರಿಯರು.
ಇದು ಬಲ್ಲವರು ತಿಳಿದು ನೋಡಿ.
ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ,
ಈ ಎರಡರ ಸಕೀಲಸಂಬಂಧವನರಿದರೆ,ಆತನೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
-ಹಡಪದ ಅಪ್ಪಣ್ಣ