ಹತ್ತುದಿನದಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಎಷ್ಟು ಕೋಟಿ ಹಣ ಬಂತು.?
ತಿರುಪತಿ: ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠದ್ವಾರ ದರ್ಶನದ ಸಂದರ್ಭ (2023ರ ಡಿಸೆಂಬರ್ 23ರಿಂದ ಈ ವರ್ಷದ ಜನವರಿಗೆ 1ರವರೆಗೆ) ಬರೀ ಹತ್ತು ದಿನಗಳಲ್ಲಿ ಭಕ್ತರಿಂದ ದೇವರ ಹುಂಡಿಗೆ 40 ಕೋಟಿ ಹಣ ಕಾಣಿಕೆಯಾಗಿ ಬಂದಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಟಿಡಿಯು 36 ಲಕ್ಷ ಲಡ್ಡುಗಳನ್ನು ಮಾರಾಟ ಮಾಡಿದೆ. 2 ಲಕ್ಷಕ್ಕೂ ಹೆಚ್ಚು ಭಕ್ತರು ಮುಡಿ ಅರ್ಪಿಸಿದ್ದಾರೆ. ದಾಖಲೆಯ ಸಂಖ್ಯೆಯಲ್ಲಿ 6.47 ಲಕ್ಷ ಭಕ್ತರು ವೈಕುಂಠದ್ವಾರ ದರ್ಶನ ಪಡೆದರು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.!