Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಾರಾಟದ ವೇಳೆಯೇ ವಿಮಾನದಲ್ಲಿ ದುರಂತ – ಬಾತ್ರೂಮ್‌ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು ವಿಮಾನ ತುರ್ತು ಭೂಸ್ಪರ್ಶ

ಪನಾಮ : ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ಖಾಸಗಿ ಫ್ಲೈಟ್‌ನಲ್ಲಿ ದುರಂತವೊಂದು ಸಂಭವಿಸಿದೆ. ವಿಮಾನದ ಬಾತ್ರೂಮ್‌ನಲ್ಲಿ ಫೈಲಟ್ ಕುಸಿದು ಬಿದ್ದು ಸಾವನ್ನಪ್ಪಿದ್ದು, ವಿಮಾನ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಅಮೆರಿಕಾದ ಪನಾಮದಲ್ಲಿ ಈ ಘಟನೆ ನಡೆದಿದ್ದು, ಈ ಫ್ಲೈಟ್‌ನಲ್ಲಿ 271 ಜನರಿದ್ದರು. ಮೃತ ಪೈಲಟ್‌ನ್ನು ಇವಾನ್ ಅಂದೂರ್ ಎಂದು ಗುರುತಿಸಲಾಗಿದೆ. ವಿಮಾನವೂ ಮಿಯಾಮಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೂರು ಗಂಟೆಯ ನಂತರ ಪೈಲಟ್ ಅಸ್ವಸ್ಥಗೊಂಡಿದ್ದು, ವಿಮಾನದ ಬಾತ್‌ರೂಮ್‌ನಲ್ಲೇ ಕುಸಿದು ಬಿದ್ದಿದ್ದಾರೆ. ವಿಮಾನದ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಹೀಗಾಗಿ ಸಹ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಗ್ ಮಾಡಿದ್ದಾರೆ. ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ವೈದ್ಯಕೀಯ ತಜ್ಞರು ಪೈಲಟ್‌ನ್ನು ಪರಿಶೀಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಾಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 56 ವರ್ಷದ ಪೈಲಟ್ ಇವಾನ್ ಅಂದೂರ್‌ ಅವರಿಗೆ 25 ವರ್ಷಗಳಿಂದ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾರಾಟದ ಸಮಯದಲ್ಲಿ ಅವರ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯ್ತಾದ್ರೂ ಸಾಧ್ಯವಾಗಲಿಲ್ಲ.