ಹಾಸನ: ತಾಯಿ, ಇಬ್ಬರು ಮಕ್ಕಳ ಸಾವು ಪ್ರಕರಣ; ಆರೋಪಿ ಅರೆಸ್ಟ್….!
ಹಾಸನ: ದಾಸರಕೊಪ್ಪಲುನಲ್ಲಿ ನಡೆದಿದ್ದ ತಾಯಿ, 2 ಮಕ್ಕಳ ನಿಗೂಢ ಸಾವಿಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜನವರಿ 1ರಂದು ತಾಯಿ ಶಿವಮ್ಮ ಹಾಗೂ ಈಕೆಯ ಮಕ್ಕಳು ಪವನ್ (10) ಮತ್ತು ಸಿಂಚನಾ (8) ನಿಗೂಢವಾಗಿ ಹತ್ಯೆಯಾಗಿದ್ದರು. ಈ ಕೊಲೆಗಳ ಜಾಡು ಹಿಡಿದು ಹೋದ ಪೊಲೀಸರು ಹಂತಕ ನಿಂಗಪ್ಪ ಕಾಗವಾಡನನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಹೇಳಿರುವ ಸತ್ಯವನ್ನು ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ. ರೀಲ್ಸ್ ಸುಂದರಿಯ ಕೊಲೆಗೈದು ಪಾಪಿ ಗೆಳೆಯ ತಲೆ ಮರೆಸಿಕೊಂಡಿದ್ದ ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಶಿವಮ್ಮ, ಪತಿ ತೀರ್ಥಪ್ರಸಾದ್ ದಂಪತಿ ಬಿಜಾಪುರದಲ್ಲಿ ಬೇಕರಿಯನ್ನು ನಡೆಸುತ್ತಿರುವಾಗ ಆರೋಪಿ ನಿಂಗಪ್ಪ ಪರಿಚಯವಾಗಿದ್ದನು. ಬಳಿಕ ಬೇಕರಿಯನ್ನು ಬಿಟ್ಟು ಪತಿ ತುಮಕೂರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ಜನವರಿ 1 ರಂದು ರಾತ್ರಿ ನ್ಯೂ ಇಯರ್ ಆಚರಣೆಗೆಂದು ಗೆಳೆಯ ನಿಂಗಪ್ಪನನ್ನು ಕರೆಯಿಸಿಕೊಂಡಿದ್ದಳು. ಈ ವೇಳೆ ಆರೋಪಿ ಹಣಕ್ಕಾಗಿ ಪೀಡಿಸಿದ್ದಾನೆ. ಆದ್ರೆ ಹಣವನ್ನು ನೀಡಿಲ್ಲ. ಹೀಗಾಗಿ ಕೋಪಗೊಂಡ ಆರೋಪಿ, ಇಬ್ಬರು ಮಕ್ಕಳು ಸಮೇತ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದನು. ಕೊಲೆ ಮಾಡಿದ ನಂತರ ಅನುಮಾನ ಬಾರದಿರಲಿ ಎಂದು ಅಡುಗೆ ಸಿಲಿಂಡರ್ನ ಪೈಪ್ ತೆಗೆದು ಅನಿಲ ಸೋರಿಕೆಯಿಂದ ಸಾವನ್ನಪ್ಪಿರುವ ರೀತಿ ಬಿಂಬಿಸಲು ಪ್ಲಾನ್ ಮಾಡಿದ್ದನು. ಈ ಸಂಬಂಧ ಪೊಲೀಸರು ಕೊಲೆಗಳ ಜಾಡು ಹಿಡಿದು ಹೋದಾಗ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.