Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಿಂದಿನ ಸರ್ಕಾರಗಳು ಕಾ ವೇರಿ ನೀರನ್ನು ಎಷ್ಟು ಬಿಡಲಾಗಿದೆ ಲೆಕ್ಕ ತೆಗೆಯಲಿ: ಸತೀಶ ಜಾರಕಿಹೊಳಿ

 

ಬೆಳಗಾವಿ: ಹಿಂದಿನ ಸರ್ಕಾರಗಳು ಸಾಕಷ್ಟು ಬಾರಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿವೆ. ರಾಜ್ಯದಲ್ಲಿ ಈ ವರೆಗಿನ ಯಾವ ಮುಖ್ಯಮಂತ್ರಿಯೂ ಇದನ್ನು ತಡೆದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಷ್ಟು ನೀರು ಹರಿಸಬೇಕು ಎಂಬ ಆದೇಶವನ್ನು ಬಿಜೆಪಿ, ಜೆಡಿಎಸ್ ಸರ್ಕಾರ ಪಾಲಿಸಿವೆ. ಇದು 10 ಸಲ ನಡೆದಿದೆ. ಯಾರೆಲ್ಲ ಮುಖ್ಯಮಂತ್ರಿ ಇದ್ದಾಗ, ಎಷ್ಟು ನೀರು ಬಿಡಲಾಗಿದೆ? ಲೆಕ್ಕ ತೆಗೆಯಲಿ ಎಂದರು.

ತಮಿಳುನಾಡಿನವರು ಹಿಂದಿನಿಂದಲೂ ಕೇಂದ್ರದ ಮೇಲೆ ಪ್ರಭಾವ ಬೀರಿ, ನೀರು ಬಿಡಲು ಒತ್ತಾಯಸುತ್ತಾರೆ. ನೀರು ಹರಿಸಲು ಯಾರು ಆದೇಶ ಮಾಡಿದ್ದಾರೋ ಅವರ ವಿರುದ್ಧ ಪ್ರತಿಭಟನೆ ಮಾಡಬೇಕೆ ಹೊರತು ನಮ್ಮ ಸರ್ಕಾರದ ವಿರುದ್ಧವಲ್ಲ ಎಂದು ಅವರು ಹೇಳಿದರು.