Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಿಂದೂ ಮಹಾಗಣಪತಿಯ ಮಹೋತ್ಸವದ ಅಂಗವಾಗಿ ಪೆಂಡಲ್ ಪೂಜೆ.!

 

 

ಚಿತ್ರದುರ್ಗ : ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಡೆಯುವ 2023ರ ಹಿಂದೂ ಮಹಾಗಣಪತಿಯ ಮಹೋತ್ಸವದ ಅಂಗವಾಗಿ ಪೆಂಡಲ್ ಪೂಜೆಯನ್ನು ಭಗವಧ್ವಜನೆಟ್ಟು, ಗೋಪೂಜೆ ಮಾಡುವ ಮುಖಾಂತರ  ಭಾನುವಾರ ಚಾಲನೆ ನೀಡಲಾಯಿತು.

ನಗರದ ಪಂಚಚಾರ್ಯ ಕಲ್ಯಾಣ ಮಂಟಪದ ಹತ್ತಿರ ಜೈನ್ದಾಮದಲ್ಲಿ ನಿರ್ಮಾಣ ಮಾಡಲಾದ ಕಂಭದಲ್ಲಿ ಆಂಜನೇಯ ಚಿತ್ರವನ್ನು ಹೊಂದಿದ ಭಗವಧ್ವಜವನ್ನು ಯಾದವ ಮಠದ ಶ್ರೀ ಕೃಷ್ಣಯಾದವನಂದ ಶ್ರೀಗಳು ನೇರವೇರಿಸಿದರು. ತದ ನಂತರ ನಡೆದ ಕಾರ್ಯಕ್ರಮದಲ್ಲಿ ಗೋಪೂಜೆಯನ್ನು ನೇರವೇರಿಸಿದ ಶ್ರೀಗಳು ಮತ್ತು ಕಾರ್ಯಕರ್ತರು ಮುಂದಿನ ದಿನದಲ್ಲಿ ನಡೆಯುವ ಹಿಂದೂ ಮಹಾ ಗಣಪತಿಯ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಇಂದಿನಿಂದ 2023ರ ಹಿಂದೂ ಮಹಾ ಗಣಪತಿಯ ಪೆಂಡಾಲ್ ನಿರ್ಮಾಣ ಕಾರ್ಯವನ್ನು ಪ್ರಾರಂಭ ಮಾಡಲಾಗುವುದು. ಇದರೊಂದಿಗೆ ಗಣಪತಿಯ ವಿವಿಧ ರೀತಿಯ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸೆ. 18 ರಂದು ವಿನಾಯಕನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. 2006 ರಿಂದ ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಪ್ರಾರಂಭವಾಯಿತು. ಇದುವರೆವಿಗೂ ಹಿಂದು ಮಹಾ ಗಣಪತಿಯಲ್ಲಿ ಪಂಚಮುಖಿ ವಿಗ್ರಹ, ಹನುಮಂತ ಹೆಗಲ ಮೇಲಿರುವ ಗಣಪ, ಪ್ರಸಕ್ತ ವರ್ಷ ಶಿವನ ರೂಪದಲ್ಲಿರುವ ವಿಗ್ರಹ ಹೀಗೆ ಪ್ರತಿ ವರ್ಷ ವಿಶಿಷ್ಟ ರೀತಿಯ ಗಣÀಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ಸಾಮಾಜಿಕ ಸಾಮರಸ್ಯೆಕ್ಕೆ ಎಡೆ ಮಾಡಿ ಕೊಟ್ಟಿದೆ. ಇದರಲ್ಲಿ ಲಕ್ಷಾಂತರ ಜನ ಭಾಗವಹಿಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಜನ ಸೇರುವ ಎರಡನೇ ಗಣೇಶ ಇದಾಗಿದೆ.

ಈ ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಯಾದವ ಮಠದ ಶ್ರೀ ಕೃಷ್ಣಯಾದವನಂದ ಶ್ರೀಗಳು, ಹೂಸದುರ್ಗದ ಶ್ರೀ ಶಾಂತವೀರ ಶ್ರೀಗಳು, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, 2023ರ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಸುರೇಶ್ ನಗಾರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್, ಮಾಜಿ ಸದಸ್ಯರಾದ ಶ್ರೀಮತಿ ರೇಖಾ, ಟೈಗರ್ ತಿಪ್ಪೇಸ್ವಾಮಿ, ಪ್ರಮುಖರಾದ ಶರಣ್, ಷಡಾಕ್ಷರಪ್ಪ, ರುದ್ರೇಶ್, ಸಂದೀಪ್, ಪ್ರಶಾಂತ್, ಓಂಕಾರ್, ಸಿದ್ದಾಪುರದ ಪರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.