Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹುಟ್ಟುಹಬ್ಬಕ್ಕೆ ಜೀವಂತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡ ಕಾಂಗ್ರೆಸ್‌ ಶಾಸಕ!

ಭೋಪಾಲ್:ಮಧ್ಯಪ್ರದೇಶದ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ತನ್ನ ವಿಚಿತ್ರ ವರ್ತನೆಯಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಬೆಂಬಲಿಗರು ನೀಡುವ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿರುವ ಅವರು ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಕುರಿತು ಶಾಸಕ ಬಾಬು ಜಂಡೆಲ್ ಮಾತನಾಡಿ, ನನ್ನ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದೇನೆ. ಪ್ರಾಣಿಗಳು ನನ್ನ ಸ್ನೇಹಿತರು. ನನ್ನ ಹಿತ್ತಲಿನಲ್ಲಿ ರಾತ್ರಿ ಮಲ್ಲಿಗೆ ಗಿಡವಿದ್ದು ಹಾವುಗಳು ಆಗಾಗ ಬರುತ್ತವೆ. ಹಾವು ಶಿವನನ್ನು ಪ್ರತಿನಿಧಿಸುತ್ತದೆ. ಹಾಗಾಗಿ ನನ್ನ ಜನ್ಮದಿನದ ಸಂದರ್ಭದಲ್ಲಿ ನಾನು ದೇವರ ಮೇಲಿನ ಭಕ್ತಿಯ ರೂಪವಾಗಿ ಅದನ್ನು ನನ್ನ ಕುತ್ತಿಗೆಗೆ ಸುತ್ತಿಕೊಂಡೆ ಎನ್ನುತ್ತಾರೆ .

ಹಾವಾಡಿಗ ತಂದ ಹಾವನ್ನು ಜಾಂಡೆಲ್ ಪೆಟ್ಟಿಗೆಯಿಂದ ಹೊರತೆಗೆದು ನಂತರ ಅವರ ಕುತ್ತಿಗೆಗೆ ಹಾಕಿಕೊಂಡಿದ್ದಾರೆ.