Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹುಬ್ಬಳ್ಳಿ : ನೈರುತ್ಯ ರೈಲ್ವೆ ವಿಭಾಗದಲ್ಲಿ ವಿಶೇಷ ರೈಲುಗಳ ಸೇವೆ ವಿಸ್ತರಣೆ

ಹುಬ್ಬಳ್ಳಿ : ರೈಲುಗಳ ಸಂಖ್ಯೆ 07339/40 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೇಸ್‌, ರೈಲುಗಳ ಸಂಖ್ಯೆ 06547/48 ಕೆ.ಎಸ್.ಆರ್ ಬೆಂಗಳೂರು ಮತ್ತು ವೇಲಂಕಣಿ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೇಸ್‌ ಮತ್ತು ರೈಲುಗಳ ಸಂಖ್ಯೆ 06545/46 ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೇಸ್‌ ರೈಲುಗಳನ್ನು ಈಗಿರುವ ಸಮಯ, ನಿಲುಗಡೆ ಮತ್ತು ಸಂಯೋಜನೆಯೊಂದಿಗೆ ವಿಸ್ತರಿಸಲು ನೈರುತ್ಯ ರೈಲ್ವೆಯೂ ಸೂಚಿಸಿದೆ.

ಅವುಗಳ ವಿವರ ಈ ಕೆಳಗಿನಂತಿದೆ.

1. ರೈಲು ಸಂಖ್ಯೆ 07339 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗುತ್ತಿದೆ.

2. ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಅಕ್ಟೋಬರ್ 1 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ನವೆಂಬರ್ 1 ರವರೆಗೆ ವಿಸ್ತರಿಸಲಾಗುತ್ತಿದೆ.

3. ರೈಲು ಸಂಖ್ಯೆ 06547 ಕೆ.ಎಸ್.ಆರ್ ಬೆಂಗಳೂರು ಮತ್ತು ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 28 ರವರೆಗೆ ವಿಸ್ತರಿಸಲಾಗುತ್ತಿದೆ. (4 ಟ್ರೀಪ್ಸ್‌ 07.10.23, 14.10.23, 21.10.23 ಮತ್ತು 28.10.23 ರಂದು ಸಂಚರಿಸಲಿದೆ).

4. ರೈಲು ಸಂಖ್ಯೆ 06548 ವೇಲಂಕಣಿ ಮತ್ತು ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 28 ರವರೆಗೆ ವಿಸ್ತರಿಸಲಾಗುತ್ತಿದೆ. (4 ಟ್ರೀಪ್ಸ್‌ 07.10.23, 14.10.23, 21.10.23 ಮತ್ತು 28.10.23 ರಂದು ಸಂಚರಿಸಲಿದೆ).

5. ರೈಲು ಸಂಖ್ಯೆ 06545 ಯಶವಂತಪುರ ಮತ್ತು ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 29 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಡಿಸೆಂಬರ್‌ 31 ರವರೆಗೆ ವಿಸ್ತರಿಸಲಾಗುತ್ತಿದೆ.

6. ರೈಲು ಸಂಖ್ಯೆ 06546 ವಿಜಯಪುರ ಮತ್ತು ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜನವರಿ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ.