Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು’- ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು:ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬಡ್ಡಿ ಆಟದಂತೆ. ಹೆಸರು ಮಾತ್ರ ಬಿಜೆಪಿ, ಹಿಡಿತ ಕೆಜೆಪಿಯದ್ದು ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಈ ಕುರಿತು ʻಎಕ್ಸ್‌ʻ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ಬಿಜೆಪಿಯಲ್ಲಿನ ರಾಜಕಾರಣ ಪ್ರೊ ಕಬ್ಬಡ್ಡಿ ಆಟದಂತೆ. ಅದರಲ್ಲಿ ಸಂತೋಷ ಕೂಟ vs ಬಿಎಸ್‌ ವೈ ಕೂಟದ ನಡುವಿನ ಆಟದಲ್ಲಿ ಒಮ್ಮೊಮ್ಮೆ ಸಂತೋಷ ಕೂಟದ ಆಟ ಮೇಲುಗೈ ಸಾಧಿಸಿದರೆ, ಮತ್ತೊಮ್ಮೆ ಬಿಎಸ್‌ ವೈ ಕೂಟದ ಮೇಲುಗೈ ಸಾಧಿಸುತ್ತದೆ ಎಂದು ಲೇವಡಿ ಮಾಡಿದೆ.

ಸದ್ಯ ನೇಮಕವಾದ ಪದಾಧಿಕಾರಿಗಳನ್ನು ನೋಡಿ ಇದು ಕೆಜೆಪಿ ಪಾರ್ಟ್2 ಎಂದು ಸ್ವತಃ ಬಿಜೆಪಿ ನಾಯಕರೇ ರೊಚ್ಚಿಗೆದ್ದಿದ್ದಾರೆ ಎಂದು ಟಾಂಗ್‌ ನೀಡಿದ್ದಾರೆ.