Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹೊಸ ವರ್ಷಕ್ಕೆ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ 5 ಡೋರ್‌ ಮಹಿಂದ್ರಾ ಥಾರ್ – ರೆಟ್ರೋ ಲುಕ್ ನಲ್ಲಿರೋ ಈ ಕಾರ್ ಹೇಗಿದೆ?

ಮಹೀಂದ್ರಾ ಕಂಪನಿಯು ಈಗಾಗಲೇ ಪೆಟ್ರೋಲ್, ಡೀಸೆಲ್ ಮಾದರಿಯ ಸಾಕಷ್ಟು ಕಾರುಗಳನ್ನೂ ಪರಿಚಯಿಸಿದ್ದು, ಇದೀಗ ಗ್ರಾಹಕರ ಬೇಡಿಕೆಯಂತೆ ಹೊಸ ವಿನ್ಯಾಸದ ಎಲೆಕ್ಟ್ರಿಕ್‌ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ಸಿದ್ಧತೆ ನಡೆಸುತ್ತಿದೆ.

ಮಹಿಂದ್ರಾ ಕಂಪನಿ ಕಾರುಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದ್ದು, ಇದರಿಂದ ಕಂಪನಿಯು ಹೊಸ ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮಹಿಂದ್ರಾ ಕಂಪನಿ ಕಾರುಗಳ ಮಾರಾಟ ಕೂಡ ಹೆಚ್ಚುತ್ತಿದೆ.

ದೇಶದ ವಿವಿಧ ಪ್ರತಿಷ್ಠಿತ ಕಾರು ತಯಾರಕ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿರುವ ಬೆನ್ನಲ್ಲೇ ಇದೀಗ ಮಹಿಂದ್ರಾ ಕಂಪನಿ ಹೊಸ ಮಾದರಿಯ ಎಲೆಕ್ಟ್ರಿಕ್ ರೂಪಾಂತರಗಳ ಜೊತೆ ಸ್ಪರ್ದಿಸಲು ಹೊಸ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಮುಂದಿನ ದಿನಗಳಲ್ಲಿ ಈ ಕಾರು ತುಂಬಾನೇ ಡಿಮ್ಯಾಂಡ್‌ ಅನ್ನು ಪಡೆಯುವ ಸಾಧ್ಯತೆಯಿದೆ.

2024ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಹಿಂದ್ರಾ ಥಾರ್

2024ರಲ್ಲಿ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಮಾದರಿಯ ಕಾರುಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಿಂದ್ರಾ ಕಂಪನಿಯ ಕಾರು ಹೆಚ್ಚಿನ ಮೈಲೇಜ್ ಗೆ ಹೆಸರುವಾಸಿ ಆಗಿರುವ ಕಾರಣ ಬಿಡುಗಡೆಗೊಂಡ ಬಳಿಕ ಹೆಚ್ಚಿನ ಸೇಲ್ ಕಾಣುತ್ತದೆ. 5 ಡೋರ್ ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ಬಿಡುಗಡೆಗೆ ಕಂಪನಿಯು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

ರೆಟ್ರೋ ಲುಕ್‌ನಲ್ಲಿ ಮಹಿಂದ್ರಾ ಥಾರ್

ಈ ಮಹಿಂದ್ರಾ ಥಾರ್ ರೆಟ್ರೋ ಲುಕ್ ನಲ್ಲಿ ಬರಲಿದೆ. ಸಣ್ಣ ವಿಂಡ್‌ಸ್ಕ್ರೀನ್, ಎರಡು ಚದರ ಎಲ್ಇಡಿ ಡಿಆರ್‌ಎಲ್‌ಗಳು, ಸಿಗ್ನೇಚರ್ ಫ್ಲಾಟ್ ರೂಫ್ ಮತ್ತು ದೊಡ್ಡ ಚಕ್ರಗಳೊಂದಿಗೆ ಚೌಕಾಕಾರದ ಮುಂಭಾಗವನ್ನು ಹೊಂದಿದ್ದು ಈ ಕಾರ್ ಬಹಳ ಆಕರ್ಷಣೀಯವಾಗಿದೆ.

ಬರೋಬ್ಬರಿ 350 ಕಿಲೋಮೀಟರ್ ಮೈಲೇಜ್

ಮೂಲಗಳ ಪ್ರಕಾರ ಈ ಕಾರು ಬರೋಬ್ಬರಿ 350 ಕಿಲೋ ಮೀಟರ್ ವ್ಯಾಪ್ತಿ ನೀಡಲಿದೆ ಎಂದು ತಿಳಿದುಬಂದಿದೆ. ಮಹಿಂದ್ರಾ ಥಾರ್ ಎಲೆಕ್ಟ್ರಿಕ್ ರೂಪಾಂತರದ ಬಗ್ಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇನ್ನು ಈ ಎಲೆಕ್ಟ್ರಿಕ್ ರೂಪಾಂತರದ ಬೆಲೆ 25 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.