Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹೋಟೆಲ್‌ನಲ್ಲಿ ಬೆಂಕಿ ಅವಘಡ- ಸುಟ್ಟು ಕರಕಲಾದ ವಾಹನಗಳು

ಮಸೂರಿ: ಉತ್ತರಾಖಂಡದ ಮಸೂರಿಯಲ್ಲಿರುವ ಕ್ಯಾಮೆಲ್ ಬ್ಯಾಕ್​ ರೋಡ್​ನಲ್ಲಿರುವ ಹೋಟೆಲ್​ನಲ್ಲಿ ಭಾನುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ.

ಮಾಹಿತಿ ಪ್ರಕಾರ ಮಸೂರಿಯ ದಿ ರಿಂಗ್ ಪೆವಿಲಿಯನ್ ಹೋಟೆಲ್​ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್​ನಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ, ಸುತ್ತಲೂ ಬೆಂಕಿ ಆವರಿಸಿತ್ತು.

ಹೋಟೆಲ್​​ನಲ್ಲಿ ಸಿಬ್ಬಂದಿ ಕುಲದೀಪ್ ಸಿಂಗ್ ಹಾಗೂ ಸಹೋದ್ಯೋಗಿಗಳು ಮಲಗಿದ್ದಾಗ ಬೆಂಕಿಯ ಶಬ್ದ ಕೇಳಿಸಿತ್ತು, ದಟ್ಟ ಹೊಗೆ ಆವರಿಸುತ್ತಿತ್ತು. ಸಾಕಷ್ಟು ಮಂದಿ ಹೋಟೆಲ್​ನಿಂದ ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಒಟ್ಟು 11 ಮಂದಿ ಸಿಬ್ಬಂದಿ ಹೋಟೆಲ್​ನಲ್ಲಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ನಂತರ ಹೋಟೆಲ್​ನ ಕಿಟಕಿ ಗಾಜು ಒಡೆದು ಕೆಲವು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.