Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ ದಂಡ ಪಾವತಿಸಿದ ಹೆಚ್​​ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಮನೆಗೆ ದೀಪಾವಳಿ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಬಳಕೆ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ ವಿಧಿಸಿದ 68,526 ರೂ. ದಂಡ ವಿಧಿಸಿದ್ದು ಅದನ್ನು ಅವರು ಪಾವತಿಸಿದ್ದಾರೆ.

ವಿದ್ಯುತ್ ಕಳ್ಳತನ ಕಾನೂನುಬಾಹಿರ ಕ್ರಿಯೆಯಾಗಿದೆ. 2003 ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135 , ಸೆಕ್ಷನ್ 150 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ವಿದ್ಯುತ್ ತಂತಿಗಳನ್ನು ಸ್ವಾಧೀನಪಡಿಸಿಕೊಂಡರೆ, ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿದ್ಯುತ್ ತಂತಿಯನ್ನು ತೆಗೆದುಕೊಂಡು ಹೋದರೆ ಇಲಾಖೆಯ ಒಪ್ಪಿಗೆಯಿಲ್ಲದೆ ವಿದ್ಯುತ್ ತಂತಿಯನ್ನು ಬಳಸಿದರೆ ಶಿಕ್ಷೆಗೆ ಅವಕಾಶ ಇದೆ. ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡಕ್ಕೆ ಕಾಯಿದೆ ಪ್ರಕಾರ ಅವಕಾಶ ಇದೆ.

ಅಕ್ರಮ ವಿದ್ಯುತ್ ಬಳಕೆ ಸಂಬಂಧಪಟ್ಟಂತೆ, ಡಿವೈಎಸ್ಪಿ ಅನುಷಾ ಅವರ ಮಾರ್ಗದರ್ಶನದಲ್ಲಿ, ಬೆಸ್ಕಾಂ ವಿಜಿಲೆನ್ಸ್ ಸೆಲ್, ವಿದ್ಯುತ್ ಬಳಕೆಯ ನಿಖರವಾದ ಮೌಲ್ಯಮಾಪನವನ್ನು ನಡೆಸಿದ್ದು, ನಿರ್ದಿಷ್ಟವಾಗಿ ಕೇವಲ 10 ನಿಮಿಷಗಳ ಕಾಲಮಿತಿಯೊಳಗೆ ಬಳಸಲಾದ ವಿದ್ಯುತ್ ಪ್ರಮಾಣವನ್ನು ಕೇಂದ್ರೀಕರಿಸಿ ಎರಡು ದಿನಗಳ ಅವಧಿಯ ಬಳಕೆಯನ್ನು ಲೆಕ್ಕ ಹಾಕಿ, ನವೆಂಬರ್ 14 ರಂದು ಸಮಗ್ರ ವರದಿಯನ್ನು ಸಲ್ಲಿಸಲಾಯಿತು. ಪರಿಣಾಮವಾಗಿ, ಬೆಸ್ಕಾಂ ಇಲಾಖೆಯು ಈಗ 68,526 ರೂ.ಗಳ ಗಣನೀಯ ದಂಡವನ್ನು ವಿಧಿಸಿದೆ.