Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಬ್ಬರು ಭಾರತೀಯ ಮೂಲದ ಅಮೇರಿಕನ್‌ ವಿಜ್ಞಾನಿಗಳಿಗೆ ಅತ್ಯುನ್ನತ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ

ವಾಷಿಂಗ್ಟನ್: ಭಾರತೀಯ ಮೂಲದ ಇಬ್ಬರು ಅಮೆರಿಕನ್ ವಿಜ್ಞಾನಿಗಳಾದ ಅಶೋಕ್ ಗಾಡ್ಗೀಲ್ ಮತ್ತು ಸುಬ್ರಾ ಸುರೇಶ್ ಅವರಿಗೆ ಅಮೇರಿಕಾ ಅತ್ಯುನ್ನತ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.

ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕಾಗಿ ಯುಸಿ ಬರ್ಕ್ಲಿಯಲ್ಲಿ ಸಿವಿಲ್ ಮತ್ತು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಎಮೆರೈಟಸ್ ಅಶೋಕ್ ಗಾಡ್ಗಿಲ್ ಅವರಿಗೆ ಪ್ರತಿಷ್ಠಿತ ಶ್ವೇತಭವನ ರಾಷ್ಟ್ರೀಯ ಪದಕವನ್ನು ಅಮೇರಿಕಾ ಅಧ್ಯಕ್ಷ ಬೈಡನ್ ಪ್ರದಾನ ಮಾಡಿದರು.ಶ್ವೇತಭವನದ ರಾಷ್ಟ್ರೀಯ ಪದಕವನ್ನು ಪಡೆದ 12 ಮಂದಿಯಲ್ಲಿ ಅಶೋಕ್ ಗಾಡ್ಗೀಲ್ ಅವರು ಒಬ್ಬರಾಗಿದ್ದಾರೆ.

ಇನ್ನು ಬ್ರೌನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಸುಬ್ರಾ ಸುರೇಶ್ ಅವರಿಗೆ ಇಂಜಿನಿಯರಿಂಗ್, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನದಲ್ಲಿನ ಸಂಶೋಧನೆಗಾಗಿ ಮತ್ತು ವಿಶೇಷವಾಗಿ ವಸ್ತು ವಿಜ್ಞಾನದ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿಜ್ಞಾನ ಪದಕವನ್ನು ನೀಡಿ ಗೌರವಿಸಲಾಯಿತು.