Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇರಾನ್ ಇಸ್ರೇಲ್ ಯುದ್ದ – ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ

ನವದೆಹಲಿ: ಇಸ್ರೇಲ್ ಮೆಲೆ ಕ್ಷಿಪಣಿ ದಾಳಿ ಮೂಲಕ ಯುದ್ದ ಸಾರಿರುವ ಇರಾನ್ ಕೃತ್ಯದಿಂದಾಗಿ ಇದೀಗ ಪ್ರಪಂಚದಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ದೇಶದಲ್ಲೂ ತೈಲ ಬೆಲೆ ಏರಿಕೆಯ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆ ಮತದಾನ ಮುಗಿಯುವರೆಗೆ ತೈಲ ಬೆಲೆ ಏರಿಕೆ ಅಸಾಧ್ಯವಾಗಿದೆ.

ಈಗಾಗಲೇ ಇರಾನ್ ಇಸ್ರೇಲ್ ವಿರುದ್ದ ತಿರುಗಿ ಬಿದ್ದಿದೆ. ಆದರೆ ಆದರೆ ಇಸ್ರೇಲ್‌, ಅಮೆರಿಕ ಸೇರಿ ಇತರೆ ರಾಷ್ಟ್ರಗಳು ಈ ದಾಳಿ ವಿರುದ್ಧ ಹೇಗೆ ಪ್ರತೀಕಾರಕ್ಕೆ ಇಳಿಯುತ್ತವೆ ಎನ್ನುವುದರ ಆಧಾರದ ಮೇಲೆ ಬೆಲೆ ಏರಿಕೆಯು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ಇದರಿಂದ ಕಳೆದ ವಾರ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ₹92.18 ಡಾಲರ್‌ಗೆ ತಲುಪಿತ್ತು. ಇದು ಕಳೆದ ಅಕ್ಟೋಬರ್‌ನಿಂದ ಗರಿಷ್ಠ ಮಟ್ಟದ ಏರಿಕೆಯಾಗಿದೆ. ಭಾನುವಾರ ಪ್ರತಿ ಬ್ಯಾರೆಲ್‌ಗೆ 90.45 ಡಾಲರ್‌ ಆಗಿದೆ. ತೈಲ ವ್ಯಾಪಾರ ಪುನರಾರಂಭದ ವೇಳೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ