Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಸ್ರೇಲ್‌ ಪ್ರೇಮಿಗಳ ಫೋಟೋ ವೈರಲ್..!

ಜೆರುಸಲೆಂ : ಇಸ್ರೇಲ್- ಪ್ಯಾಲೆಸ್ಟೈನ್ ನಡುವಿನ ರಕ್ತಪಾತ ಮುಂದುವರಿದಿದೆ. ಇಸ್ರೇಲ್‌ನಲ್ಲಿ ನಡೆದ ಸಂಗೀತೋತ್ಸವದಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿದಾಗ ಬದುಕುಳಿದ ದಂಪತಿಗಳು ಆ ದಿನ ಕರಾಳತೆ ಬಗ್ಗೆ ವಿವರಿಸಿದ್ದಾರೆ. ಕಣ್ಣೇದುರೆ ನೂರಾರು ಜನ ದಾಳಿಕೋರರಿಗೆ ಬಲಿಯಾಗುತ್ತಿದ್ದಾರೆ. ಆ ವೇಳೆ ಅಮೀತ್ ಮತ್ತು ನಿರ್ ಜೋಡಿ ಪೊದೆಯಲ್ಲಿ ಅವಿತುಕೊಂಡು ಜೀವ ಉಳಿಸಿಕೊಂಡಿದ್ದಾರೆ. ತಾವು ಬದುಕುವುದಿಲ್ಲ ಎಂದುಕೊಂಡು ಕೊನೆಯ ಕ್ಷಣದಲ್ಲಿ ಪರಸ್ಪರ ಚುಂಬಿಸುತ್ತಾ ಕ್ಲಿಕ್ಕಿಸಿಕೊಂಡ ಸೆಲ್ಪಿ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಅಮೀತ್ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ಕನಿಷ್ಠ 260 ಜನ ಸಾವನ್ನಪ್ಪಿದರು, “ನಮ್ಮ ಪಕ್ಕದಲ್ಲಿಯೇ ಬುಲೆಟ್‌ಗಳ ಸದ್ದಾಗುತ್ತಿದೆ ನಮ್ಮ ಹಿಂದೆ ಭಯೋತ್ಪಾದಕರು ಮೋಟಾರ್‌ಸೈಕಲ್‌ಗಳಲ್ಲಿ ಎಲ್ಲೆಡೆ ಸುತ್ತುತ್ತಿದ್ರು” ಎಂದು ಬರೆದಿದ್ದಾರೆ. ಜೊತೆಗೆ ನಮ್ಮ ಮುಂದೆಯೇ ಅದೆಷ್ಟೋ ಜೋಡಿಗಳು ಭೀಕರ ಅಂತ್ಯ ಕಾಣುವುದನ್ನು ನೋಡುತ್ತಾ ಆ ಜೋಡಿಗಳ ಬಗ್ಗೆ ಯೋಚಿಸುತ್ತಿದ್ದೇವು ಎಂದು ಬರೆದುಕೊಂಡಿದ್ದಾರೆ. ಬರೆದಿದ್ದಾರೆ ಮುಂದೆಯೇ ಸಾಕಷ್ಟು ಜೋಡಿಗಳು “ನಮ್ಮದಕ್ಕಿಂತ ವಿಭಿನ್ನವಾದ ಅಂತ್ಯವನ್ನು ಹೊಂದಿರುವ ಎಲ್ಲಾ ಇತರ ಜೋಡಿಗಳ ಬಗ್ಗೆ ನಾನು ಯೋಚಿಸುತ್ತಿದ್ದೇನೆ” ಎಂದು ಅವರು ಹೇಳಿದರು.