Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಸ್ರೇಲ್‌, ಹಮಾಸ್ ಉಗ್ರರ ನಡುವೆ ಯುದ್ಧ : ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಭಯಾನಕ ಷರತ್ತು

ಇಸ್ರೇಲ್‌, ಹಮಾಸ್ ಉಗ್ರರ ನಡುವಿನ ಯುದ್ಧ ಮುಂದುವರೆದಿದೆ. ಯುದ್ಧದ ಮಧ್ಯೆ ಹಮಾಸ್ ಉಗ್ರರು ಇನ್ನಿಬ್ಬರು ಒತ್ತೆಯಾಳುಗಳನ್ನ ರೆಡ್ ಕ್ರಾಸ್ ವಶಕ್ಕೆ ನೀಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗಾಜಾ ಪಟ್ಟಿ ಬಳಿ ದಾಳಿ ನಡೆಸಿ ಇಸ್ರೇಲಿ ಪ್ರಜೆಗಳು ಸೇರಿದಂತೆ ನೂರಾರು ಜನರನ್ನು ಅಪಹರಿಸಿದ್ದರು. ಅವರನ್ನು ಒತ್ತೆಯಾಳಾಗಿ ಇಟ್ಟ 2 ವಾರಗಳ ಬಳಿಕ ಕಳೆದ ಶುಕ್ರವಾರ ಅಮೆರಿಕ ಮೂಲದ ಜುಡಿತ್ ಹಾಗೂ ನಟಾಲಿ ರಾನನ್ ಅವರನ್ನು ಹಮಾಸ್ ಬಿಡುಗಡೆ ಮಾಡಿದೆ. ಇಸ್ರೇಲಿ ಸೇನೆಯ ಅಂದಾಜಿನ ಪ್ರಕಾರ 220ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಹಮಾಸ್ ವಶದಲ್ಲಿದ್ದಾರೆ. ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಕತಾರ್ ದೇಶ ಮಧ್ಯಸ್ಥಿಕೆ ವಹಿಸಿದೆ. ಅಮೆರಿಕಾದಿಂದಲೂ ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ನಡೆಸಲಾಗಿದೆ. ಈ ಒತ್ತೆಯಾಳುಗಳ ಸುರಕ್ಷತೆಯ ದೃಷ್ಟಿಯಿಂದಲೇ ಇಸ್ರೇಲ್ ಭೂಸೇನೆಯ ಗಾಜಾ ಪಟ್ಟಿ ಮೇಲಿನ ದಾಳಿ ವಿಳಂಬವಾಗಿದೆ. ಇಸ್ರೇಲ್‌ನ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಷರತ್ತು ಹಾಕುತ್ತಿದ್ದಾರೆ. ಗಾಜಾ ಪಟ್ಟಿಯ ಆಸ್ಪತ್ರೆಗಳಿಗೆ ಇಂಧನ ಪೂರೈಸಲು ಇಸ್ರೇಲ್‌ಗೆ ಬೇಡಿಕೆ ಇಡಲಾಗಿದೆ. ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ, ಇಂಧನವೂ ಇಲ್ಲ. ಐಸಿಯು, ವಾರ್ಡ್‌ಗಳಲ್ಲಿ ಮಕ್ಕಳು, ನವಜಾತ ಶಿಶುಗಳ ಚಿಕಿತ್ಸೆಗೆ ಭಾರೀ ತೊಂದರೆ ಎದುರಾಗಿದೆ. ಹಮಾಸ್ ಉಗ್ರರ ಈ ಬೇಡಿಕೆಯಂತೆ ಇಂಧನ ಪೂರೈಸಲು ಇಸ್ರೇಲ್ ಒಪ್ಪಿಲ್ಲ. ಇದರಿಂದಾಗಿ ಒತ್ತೆಯಾಳುಗಳ ಬಿಡುಗಡೆಯ ಸಂಧಾನ ಮಾತುಕತೆ ವಿಫಲವಾಗಿದೆ.