Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಏ.1, 2 ರಂದು ಪೋಸ್ಟ್‌ ಆಫೀಸ್‌ ಸೇವೆ ಲಭ್ಯವಿಲ್ಲ

ಅಂಚೆ ಕಚೇರಿಗಳಲ್ಲಿ ಏಪ್ರಿಲ್‌ 1 ಸೋಮವಾರ ಮತ್ತು 2 ಮಂಗಳವಾರದಂದು ಬ್ಯಾಂಕಿಂಗ್‌ ಸೇವೆ ಲಭ್ಯವಿರುವುದಿಲ್ಲ.

ವರ್ಷಾಂತ್ಯದ ಲೆಕ್ಕಾಚಾರಗಳು ಮತ್ತು ಬಡ್ಡಿ ಲೆಕ್ಕಾಚಾರಗಳು ನಡೆಯಲಿರುವುದರಿಂದ ಏ. 1 ಮತ್ತು 2 ರಂದು ಅಂಚೆ ವಿಭಾಗದ ಯಾವುದೇ ಅಂಚೆ ಕಚೇರಿಯಲ್ಲಿ ಉಳಿತಾಯಖಾತೆಗಳಿಗೆ ಸಂಬಂಧಿಸಿದಂತೆ ವ್ಯವಹಾರ, ಬ್ಯಾಂಕಿಂಗ್‌ ಸೇವೆ
ಇರುವುದಿಲ್ಲ.

ಇದನ್ನು ಹೊರತುಪಡಿಸಿ ಪತ್ರದ ಅಂಚೆ ಸೇವೆ, ಎಟಿಎಂ ಸೇವೆ ನಿರಂತರವಾಗಿರುತ್ತದೆ ಎಂದು ಹೇಳಲಾಗಿದೆ.