Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಐಪಿಎಲ್ 2024ರಲ್ಲಿ ಮತ್ತೊಬ್ಬ ಹೊಸ ನಾಯಕ – ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಶುಭಮನ್ ಗಿಲ್ ಆಯ್ಕೆ

ಹಾರ್ದಿಕ್ ಪಾಂಡ್ಯ ತಮ್ಮ ಹಳೆಯ ತಂಡ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. ಹೀಗಾಗಿ, ಗುಜರಾತ್ ಟೈಟಾನ್ಸ್ ತಂಡದ ನೂತನ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಿದೆ. ಹೀಗಾಗಿ, ಐಪಿಎಲ್ 2024ರಲ್ಲಿ ಮತ್ತೊಬ್ಬ ಹೊಸ ನಾಯಕ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಬದಲಿಗೆ ಯುವ ಆರಂಭಿಕ ಬ್ಯಾಟರ್ ಗಿಲ್ ಈ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. 2022 ರಲ್ಲಿ ಗುಜರಾತ್‌ ತಂಡವು ಪಾಂಡ್ಯ ನಾಯಕತ್ವದಲ್ಲಿ ಚೊಚ್ಚಲ ಋತುವಿನಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಕಳೆದ ಋತುವಿನಲ್ಲಿ ತಂಡವು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು. ಹೊಸ ಋತುವಿನಲ್ಲಿ ತಂಡವನ್ನು ಮುನ್ನಡೆಸಲು ಶುಭಮನ್ ಗಿಲ್ ಸಿದ್ಧರಾಗಿದ್ದಾರೆ ಎಂದು ಗುಜರಾತ್ ಟೈಟಾನ್ಸ್ ಹೇಳಿದೆ. 24 ವರ್ಷದ ಗಿಲ್ ಇತ್ತೀಚೆಗೆ ವಿಶ್ವಕಪ್ 2023ರಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಗಿಲ್‌ ಐಪಿಎಲ್‌ನಲ್ಲಿ ಉತ್ತಮ ಆಟ ಆಡಿದ್ದಾರೆ. ಗಿಲ್ ಇದುವರೆಗೆ 91 ಪಂದ್ಯಗಳನ್ನು ಆಡಿದ್ದು, 38ರ ಸರಾಸರಿಯಲ್ಲಿ 2790 ರನ್ ಗಳಿಸಿದ್ದಾರೆ. 3 ಶತಕ ಹಾಗೂ 18 ಅರ್ಧ ಶತಕ ಬಾರಿಸಿದ್ದಾರೆ.