Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಐಫೋನ್ ಹ್ಯಾಕ್- ಭಾರತ ಒಕ್ಕೂಟ ನಾಯಕರಿಂದ ಆರೋಪ

ನವದೆಹಲಿ: ಐಫೋನ್‌ ಗಳಿಂದ ಸಂಭವಿಸಬಹುದಾದ ಹ್ಯಾಕಿಂಗ್ ಬಗ್ಗೆ ಆ್ಯಪಲ್ ಕಂಪನಿಯು ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ಎಚ್ಚರಿಕೆ ನೀಡಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಸಂಸದರಾದ ಶಶಿ ತರೂರ್, ಪ್ರಿಯಾಂಕ ಚತುರ್ವೇದಿ, ಅಸಾದುದ್ದೀನ್ ಓವೈಸಿ ಹಾಗೂ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿ, ಗಂಭೀರ ಆರೋಪ ಮಾಡಿದ್ದಾರೆ.

ಆಪಲ್ ಕಂಪೆನಿಯಿಂದ ಸ್ವೀಕರಿಸಿದ, ಐಫೋನ್ಗಳನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರು ದೂರದಿಂದಲೇ ಹ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂಬ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.

ಹೆಚ್ಚಿನ ಮಟ್ಟದ ಭದ್ರತೆ ಸೌಲಭ್ಯಗಳನ್ನು ಹೊಂದಿರುವ ಆ್ಯಪಲ್ ಐಫೋನ್ಗಾಗಿ ಕಂಪನಿ ಹೊಸದಾಗಿ ಬಿಡುಗಡೆ ಮಾಡಿರುವ 17.1 IOSಗೆ ಅಪ್ಗ್ರೇಡ್ ಆಗಿ ಲಾಕ್ಡೌನ್ ಮೋಡ್ ಆನ್ ಮಾಡಿಕೊಳ್ಳುವಂತೆ ಮೆಸ್ಸೇಜ್ನಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಇಂಡಿಯಾ ಒಕ್ಕೂಟದ ಅನೇಕ ನಾಯಕರ ಐಫೋನ್‌ ಹ್ಯಾಕಿಂಗ್‌ಗೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನು, 2021ರಲ್ಲಿ ಪೆಗ್ಗಾಸೆಸ್ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫ್ಯೂಚರ್ನಲ್ಲಿ ಲಾಕ್ಡೌನ್ ಮೋಡ್ ಪರಿಚಯಿಸಿತ್ತು. ಈ ಫ್ಯೂಚರ್ ಹ್ಯಾಕರ್‌ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ದಾಖಲೆ, ಮಾಹಿತಿಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎನ್ನಲಾಗಿದೆ.

ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಫೋನ್ ಗೆ ಪ್ರವೇಶ ಮಾಡಿದರೆ, ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೊ ಫೋನ್ಗಳನ್ನು ದೂರದಿಂದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.