Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಒಡೆದ ಹಿಮ್ಮಡಿ ಪಾದ ಸರಿಪಡಿಸಲು ಇಲ್ಲಿದೆ ಮನೆಮದ್ದು…!

ಪಾದವು ದೇಹ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸುವ ಒಂದು ಅಂಗ. ಪಾದದಲ್ಲಿ ಇರುವ ಪ್ರತಿಯೊಂದು ಬೆರಳು, ಹಿಮ್ಮಡಿಯು ವಿಶೇಷ ಚಕ್ರಗಳನ್ನು ಒಳಗೊಂಡಿದ್ದು, ಅವು ದೇಹದ ಆರೋಗ್ಯಕ್ಕೆ ಅನುವುಮಾಡಿಕೊಡುತ್ತವೆ. ನೆಲದ ಸ್ಪರ್ಶವನ್ನು ಸದಾ ಪಡೆದು ಕೊಳ್ಳುವ ಪಾದಗಳಿಗೆ ಧೂಳು, ಕೊಳಕು ಹಾಗೂ ಅನಾಹುತಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪಾದಗಳು ಬಿರುಕು ಹಾಗೂ ನೋವು ಉಂಟಾಗುತ್ತವೆ. ಅವು ನಡೆಯುವಾಗ ಹಾಗೂ ಮಲಗಿರುವಾಗ ಸಾಕಷ್ಟು ನೋವನ್ನು ಉಂಟುಮಾಡುವುದು. ಅಲ್ಲದೆ ನೋಡುಗರಿಗೂ ಒಂದು ಬಗೆಯ ಶುಚಿತ್ವ ಇಲ್ಲ ಎನ್ನುವ ಭಾವನೆಯನ್ನು ಮೂಡಿಸುವುದು. ಲಿಸ್ಟರಿನ್ ಥೈಮೋಲ್ ಮತ್ತು ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಇದು ಕಾಲ್ಬೆರಳಿನ ಉಗುರು ಹಾಗೂ ಹಿಮ್ಮಡಿಯ ಒಡಕಿನ ಪ್ರದೇಶದಲ್ಲಿ ಶಿಲೀಂದ್ರಗಳು ಸೇರಿಕೊಂಡಿರುತ್ತದೆ. ಅಂತಹ ಶಿಲೀಂದ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಪಾದಗಳಲ್ಲಿ ಇರುವ ಬಿರುಕುಗಳನ್ನು ಹಾಗೂ ಚರ್ಮಗಳನ್ನು ಶಮನಗೊಳಿಸುವುದು. ಪ್ಲ್ಯಾಂಟರ್ ನರಹುಲಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುವುದು. ವಿನೆಗರ್ ಅಲ್ಲಿ ಇರುವ ಸೌಮ್ಯ ಆಮ್ಲಗಳು ಶುಷ್ಕ ಮತ್ತು ಸತ್ತ ಚರ್ಮವನ್ನು ಮೃದುಗೊಳಿಸುತ್ತದೆ.ಬೇಕಾಗುವ ಸಾಮಾಗ್ರಿಗಳು1 ಕಪ್ ಲಿಸ್ಟರಿನ್1 ಕಪ್ ಬಿಳಿ ವಿನೆಗರ್2 ಕಪ್ ನೀರು ಬಳಸುವ ವಿಧಾನ .ಒಂದು ಬುಟ್ಟಿಯಲ್ಲಿ 1 ಕಪ್ ಲಿಸ್ಟರಿನ್, 1 ಕಪ್ ಬಿಳಿ ವಿನೆಗರ್ ಮತ್ತು 2 ಕಪ್ ನೀರನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.ಮಿಶ್ರಣದಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೆನೆಯಿಡಿ.

ನಂತರ ಪಾದ ಹಾಗೂ ಹಿಮ್ಮಡಿಯನ್ನು ಪ್ಯೂಮಿಸ್ ಕಲ್ಲು ಅಥವಾ ಹಿಮ್ಮಡಿ ಸ್ಕ್ರಬ್ ನಿಂದ ಉಜ್ಜಿ. ನಂತರ ಮೃದು ನೀರಿನಲ್ಲಿ ತೊಳೆಯಿರಿ. ಬಳಿಕ ಕಾಲನ್ನು ಒಣಗಿಸಿ, ಮಾಯ್ಚುರೈಸ್ ಕ್ರೀಮ್ ಅನ್ನು ಅನ್ವಯಿಸಿ. ನಿಮ್ಮ ಪಾದಗಳ ಬಿರುಕು ಗುಣಮುಖವಾಗುವ ತನಕ ಈ ಕ್ರಮವನ್ನು ದಿನವೂ ಅನುಸರಿಸಿ.

ಅಕ್ಕಿ ಹಿಟ್ಟು ಚರ್ಮ ಸುಲಿಯುವುದನ್ನು ತಡೆಯುತ್ತದೆ. ಇದು ಚರ್ಮವನ್ನು ಶುದ್ಧೀಕರಿಸುವುರ ಜೊತೆಗೆ ಮರು ಜೀವವನ್ನು ನೀಡುವುದು. ಜೇನುತುಪ್ಪ ನೈಸರ್ಗಿಕವಾದ ನಂಜು ನಿರೋಧಕವಾಗಿದ್ದು, ಅದು ಬಿರುಕು ಬಿಟ್ಟ ಪಾದಗಳನ್ನು ಗುಣಪಡಿಸಲು ಸಹಾಯ ಮಾಡುವುದು. ವಿನೆಗರ್ ಸೌಮ್ಯವಾದ ಆಮ್ಲ. ಅದು ಶುಷ್ಕ ಮತ್ತು ಸತ್ತ ಚರ್ಮವನ್ನು ಮೃದುಗೊಳಿಸುತ್ತದೆ. ಇದು ಚರ್ಮ ಸುಲಿಯುವುದನ್ನು ತಡೆಯುವುದು. 3 ಟೀ ಚಮಚ ಅಕ್ಕಿ ಹಿಟ್ಟು,2-3 ಹನಿ ಆಪಲ್ ಸೈಡರ್ ವಿನೆಗರ್.1 ಟೀ ಚಮಚ ಜೇನುತುಪ್ಪ.ಬಳಸುವ ವಿಧಾನಒಂದು ಬೌಲ್ ಅಲ್ಲಿ 3 ಟೀ ಚಮಚ ಅಕ್ಕಿ ಹಿಟ್ಟು, 2-3 ಹನಿ ಆಪಲ್ ಸೈಡರ್ ವಿನೆಗರ್ ಮತ್ತು 1 ಟೀ ಚಮಚ ಜೇನುತುಪ್ಪವನ್ನು ಸೇರಿಸಿ, ಮೃದುವಾದ ಪೇಸ್ಟ್ ತಯಾರಿಸಿ.ಪಾದವನ್ನು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಹಿಮ್ಮಡಿಗೆ ತಯಾರಿಸಿದ ಪೇಸ್ಟ್ ಅನ್ನು ಅನ್ವಯಿಸಿ, ಸ್ಕ್ರಬ್‍ಅಲ್ಲಿ ಉಜ್ಜಿ.ನಂತರ ಸ್ಚಚ್ಛವಾದ ನೀರಿನಿಂದ ತೊಳೆಯಿರಿ.ವಾರದಲ್ಲಿ2-3 ಬಾರಿ ಈ ಕ್ರಮವನ್ನು ಅನುಸರಿಸುವುದರಿಂದ ಹಿಮ್ಮಡಿಯು ಕೋಮಲತೆಯನ್ನು ಪಡೆದುಕೊಳ್ಳುವುದು. ಬಾಳೆಹಣ್ಣು ನೈಸರ್ಗಿಕವಾದ ಮಾಯ್ಚುರೈಸ್ ಗುಣವನ್ನು ಪಡೆದುಕೊಂಡಿದೆ. ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದು ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಕಾಪಾಡಿಕೊಳ್ಳುವುದು. ಹಿಮ್ಮಡಿ ಒಡೆಯದಂತೆ ರಕ್ಷಣೆ ನೀಡುವುದು.ಹಣ್ಣಾದ ಎರಡು ಬಾಳೆಹಣ್ಣನ್ನು ಒಂದು ಬೌಲ್ ಅಲ್ಲಿ ಕಿವುಚಿಕೊಳ್ಳಿ. (ಹಣ್ಣಾಗದ ಬಾಳೆ ಹಣ್ಣು ಚರ್ಮಕ್ಕೆ ಒರಟಾದ ಅನುಭವ ನೀಡುವುದು)ಕಿವುಚಿಕೊಂಡ ಬಾಳೆ ಹಣ್ಣನ್ನು ಪಾದಗಳಿಗೆ, ಬೆರಳುಗಳ ಮಧ್ಯೆ ಹಾಗೂ ಹಿಮ್ಮಡಿ ಸೇರಿದಂತೆ ಪಾದದ ಎಲ್ಲಾ ಭಾಗಗಳಿಗೆ ಅನ್ವಯಿಸಿ.20 ನಿಮಿಷದ ಬಳಿಕ ಶುದ್ಧವಾದ ನೀರಿನಲ್ಲಿ ಪಾದವನ್ನು ನೆನೆಯಿಡಿ.ಪ್ರತಿದಿನ ಮಲಗುವ ಮುನ್ನ ಈ ಕ್ರಮವನ್ನು ಅನ್ವಯಿಸುವುದರಿಂದ ಪಾದದ ಆರೋಗ್ಯ ಉತ್ತಮವಾಗಿರುತ್ತದೆ. ಜೇನುತುಪ್ಪ ನೈಸರ್ಗಿಕ ಹ್ಯೂಮೆಕ್ಟಂಟ್. ಇದು ಚರ್ಮದ ಒಳ ಹಾಗೂ ಹೊರ ಪ್ರದೇಶಗಳಿಗೆ ಹೆಚ್ಚಿನ ತೇವಾಂಶ ಒದಗಿಸುವುದು. ಚರ್ಮದ ಹೊರ ಪದರದಲ್ಲಿ ಉಬ್ಬುವುದು, ಒಡೆಯುವ ಸಮಸ್ಯೆಗಳನ್ನು ನಿಯಂತ್ರಿಸುವುದು. ಒಂದು ಟಬ್ ಅಲ್ಲಿ ಬೆಚ್ಚಗಿನ ನೀರಿಗೆ ಒಂದು ಕಪ್ ಜೇನುತುಪ್ಪವನ್ನು ಸೇರಿಸಿ.10 ನಿಮಿಷಗಳ ಕಾಲ ಕಾಲನ್ನು ನೀರಿನಲ್ಲಿ ನೆನೆಸಿ. ನಂತರ 20 ನಿಮಿಷಗಳ ಕಾಲ ಪಾದವನ್ನು ಮಸಾಜ್ ಮಾಡಿ.ತಕ್ಷಣಕ್ಕೆ ಸ್ಕ್ರಬ್ ಅಲ್ಲಿ ಅಥವಾ ಪ್ಯೂಮಿಸ್ ಕಲ್ಲಿನಲ್ಲಿ ಮಸಾಜ್ ಮಾಡಿದರೆ ಸತ್ತ ಕೋಶಗಳು ಹಾಗೂ ಚರ್ಮ ನಿರ್ಮೂಲನೆಯಾಗುತ್ತವೆ.ಸ್ವಚ್ಛಗೊಂಡ ಪಾದ ಒಣಗಿದ ಮೇಲೆ ಮಾಯ್ಚುರೈಸ್ ಹಾಕಿ ಮಸಾಜ್ ಮಾಡಿ.ರಾತ್ರಿ ಮಲಗುವ ಮುನ್ನ ಈ ಕ್ರಮ ಅನುಸರಿಸಿದರೆ ಬಹುಬೇಗ ಸಮಸ್ಯೆ ನಿವಾರಣೆ ಹೊಂದುವುದು.