Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕರ್ನಾಟಕದಲ್ಲಿರುವುದು ಎಟಿಎಂ ಸರ್ಕಾರ.! ಡಾ.ಪ್ರಮೋದ್ ಸಾವಂತ್ ಆರೋಪ.!

 

ಚಿತ್ರದುರ್ಗ: ಕರ್ನಾಟಕದಲ್ಲಿರುವುದು ಎಟಿಎಂ ಸರ್ಕಾರ, ಇದ್ದು ಇಲ್ಲಿ ಹಣಗಳಿಸಿ ತನ್ನ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಕಳಿಸುತ್ತಿದ್ದಾರೆ. ಅವರಿಗೆ ಕರ್ನಾಟಕದಿಂದಲೇ ಅತೀ ಹೆಚ್ಚು ಹಣ ಸಂದಾಯ ಆಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.

ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಪ್ರಮುಖರ  ಸಮಾವೇಶ ಹಾಗೂ ಪ್ರಬುದ್ಧರ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು 10 ವರ್ಷದ ಹಿಂದೆ ಬಿಜೆಪಿ ಗೆದ್ದ ನಂತರ ಮೋದಿ ಎಲ್ಲಾ ಗ್ಯಾರೆಂಟಿ 100% ಪುರೈಸಿದೆ. ಕಾಂಗ್ರೇಸ್ ಗ್ತಾರೆಂಟಿ ಪುರೈಸಲು ಸಾಧ್ಯವೇ ಇಲ್ಲ. ಕಾರಣ ಮೊದಲಿನಿಂದಲೂ ಸಿದ್ದರಾಮಯ್ಯ ಹಾಡಿದ ಮಾತಿನಂತೆ ನಡೆದುಕೊಂಡಿಲ್ಲ. 5000 ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ನ್ಯಾಯ ಕೊಡಲು ಸಿದ್ದರಾಮಯ್ಯ ಅವರಿಗೆ ಆಗಿಲ್ಲ. ಮೋದಿ ಅವರು ರೈತರಿಗೆ ನೀಡಿದ ಹಣ ನೇರವಾಗಿ ಖಾತೆಗೆ ಬರುತ್ತಿದೆ. ಆದರೆ ಇಲ್ಲಿ ರಾಜ್ಯ ಸರ್ಕಾರ ನೀಡದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.

ಈ ಕ್ಷೇತ್ರದಲ್ಲಿ ಬಂದಿರೋದು ಮೋದಿ ಸರ್ಕಾರ ಮತ್ತೊಮ್ಮೆ ತರಬೇಕಿದೆ  ಮಹಿಳೆಯರ ಸಬಲೀಕರಣ ಆಗಬೇಕಿದೆ. ಹೆಣ್ಣು ಗಂಡು ಒಂದೇ ಎಂದು ಸಾರಲು ಯೋಜನೆಗಳನ್ನು ರೂಪಿಸಿದರು.ಎಲ್ಲಾ ಮನೆಗಳಿಗೆ ನೀರು ಕುಡಿಸಲು ಯೋಜನೆ. ಎಲ್ಲಾ ಮನೆಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಸಿದ್ದಾರೆ. ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಮುದ್ರಾ ಯೋಜನೆಯಿಂದ ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಪಡೆಯಲು ಅನುವು ಮಾಡಿದ್ದಾರೆ ಅದು ಯಾವುದೇ ಗ್ಯಾರೆಂಟಿ ಪಡೆಯದೆ. ಕಮಲ ಪಿಎಂ ವಿಶ್ವಕರ್ಮ ಯೋಜನೆಯಿಂದ ಸಾಲ ಸೌಲಭ್ಯ. ಮುಸ್ಲಿಂ ಮಹಿಳೆಯರಿಗೆ ನ್ಯಾಯಾ ಕೊಡಿಸಲು ತಲಾಖ್ ರದ್ದು ಮಾಡಿದ್ದಾರೆ ಎಂದರು.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಜಿಹೆಚ್ ತಿಪ್ಪಾರೆಡ್ಡಿ ,ಪರಿಷತ್ ಶಾಸಕ ಕೆ ಎಸ್ ನವೀನ್ ಚಿದಾನಂದ ಗೌಡ, ಅನಿಲ್ ಕುಮಾರ್, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಭೈರತಿ ಬಸವರಾಜು, ಮಾಜಿ ಶಾಸಕರಾದ ನೇರ್ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾದ್ಯಕ್ಷ ಎ ಮುರಳಿ ಭಾಗವಹಿಸಿದ್ದರು. ಮೂರಾರ್ಜಿ ಪ್ರಾರ್ಥಿಸಿದರೆ ಸಿದ್ದಾಪುರದ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.