Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯುತ್ತೀರಾ ಹಾಗಾದರೆ ಅದರ ಉಪಯೋಗ ಎಷ್ಟಿದೆ ನೋಡಿ

ಕಲ್ಲಂಗಡಿ ಸಿಪ್ಪೆಯಿಂದ ಉಪ್ಪಿನಕಾಯಿ ತಯಾರಿಸಬಹುದು. ಸಿಪ್ಪೆಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕಿದರೆ ತುಂಬಾ ರುಚಿಯಾಗಿರುತ್ತದೆ. ಇನ್ನು, ಸಿಪ್ಪೆಯ ಬಿಳಿ ಭಾಗದಿಂದ ಸೂಪ್​​ಗಳನ್ನು ತಯಾರಿಸಬಹುದು.

ಕೆಲವು ದೇಶಗಳಲ್ಲಿ ಈ ಸಿಪ್ಪೆಯಿಂದ ಅನೇಕ ಬಗೆಯ ಅಡುಗೆ ಮಾಡುತ್ತಾರೆ. ಸೂರ್ಯ ಬಿಸಿಲಿನಿಂದ ಚರ್ಮ ಡೈಯಾಗಿ ಹಾನಿಗೊಳಗಾಗುತ್ತದೆ. ಆ ವೇಳೆ ತೇವಾಂಶವನ್ನು ಮರಳಿ ಪಡೆಯಲು ಕಲ್ಲಂಗಡಿ ಸಿಪ್ಪೆಯನ್ನು ಬಳಸಿ.

ಇದು ಚರ್ಮದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಮೊಡವೆಗಳನ್ನು ನಿವಾರಿಸುತ್ತದೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ ಮತ್ತು ಸಿ ಅಂಶವಿದೆ. ಅವು ತ್ವಚೆಯನ್ನು ರಕ್ಷಿಸುತ್ತವೆ.

ಆದ್ದರಿಂದ, ಕಲ್ಲಂಗಡಿ ಸಿಪ್ಪೆಯನ್ನು ಅರೆದು ಚರ್ಮಕ್ಕೆ ಅಪ್ಲೈ ಮಾಡಬಹುದು. ಕಲ್ಲಂಗಡಿ ಸಿಪ್ಪೆಯನ್ನು ಮಿಕ್ಸರ್​​ನಲ್ಲಿ ಹಾಕಿ, ಜ್ಯೂಸ್ ನಂತೆ ಮಾಡಿ ದೇಹಕ್ಕೆ ಹಚ್ಚಿಕೊಳ್ಳಬಹುದು.

ನೈಸರ್ಗಿಕ ಫೇಸ್‌ಪ್ಯಾಕ್‌ನಂತೆ ಬಳಸಬಹುದು. ಕಲ್ಲಂಗಡಿ ಹಣ್ಣಿನ ಸಿಪ್ಪೆಯ ರಸದಿಂದ ಐಸ್ ಕ್ಯೂಬ್ ತಯಾರಿಸಿ ಇದನ್ನು ನೈಸರ್ಗಿಕ ಟೋನರ್ ಆಗಿ ಬಳಸಬಹುದು. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

ಇದು ಆಂಟಿ ಬ್ಯಾಕ್ಟಿರಿಯಲ್ ಗುಣಗಳನ್ನು ಹೊಂದಿದ್ದು, ಕಪ್ಪು ಕಲೆ, ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸುತ್ತದೆ. ಸಿಪ್ಪೆಯಿಂದ ಮುಖವನ್ನು ಉಜ್ಜಿಕೊಳ್ಳುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.

ಕಲ್ಲಂಗಡಿ ಸಿಪ್ಪೆಯಲ್ಲಿ ಸಾರಜನಕವಿದೆ. ಹಾಗಾಗಿ ಇವುಗಳನ್ನು ಕಾಂಪೋಸ್ಟ್ ಗುಂಡಿಗೆ ಹಾಕಿದರೆ 90 ದಿನಗಳ ನಂತರ ನೈಸರ್ಗಿಕ ಗೊಬ್ಬರ, ವರ್ಮಿಕಾಂಪೋಸ್ಟ್ ಆಗಿ ಬದಲಾಗುತ್ತದೆ. ಇದನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.