Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಳಮಶ್ಶೇರಿ ತ್ರಿವಳಿ ಬಾಂಬ್ ಸ್ಫೋಟಕ್ಕೆ ದುಬೈನಲ್ಲಿ ಸಂಚು’ – ಎನ್ಐಎ ಮಾಹಿತಿ

ಕೇರಳ: ಕಳಮಶ್ಶೇರಿಯ ಕನ್ವೆನ್ಶನ್ ಹಾಲ್‌‌ನಲ್ಲಿ ತ್ರಿವಳಿ ಬಾಂಬ್ ಸ್ಫೋಟಕ್ಕೆ ದುಬೈನಲ್ಲಿ ಸಂಚನ್ನು ರೂಪಿಸಲಾಗಿತ್ತು ಅನ್ನುವ ಮಾಹಿತಿ ಎನ್ಐಎ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸದ್ಯ ತನಿಖೆಯನ್ನು ದುಬೈಗೆ ವಿಸ್ತರಿಸಲಾಗಿದೆ. ಇತ್ತೀಚೆಗೆ ಯಹೋವನ ಸಮಾವೇಶ ನಡೆಯುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿತ್ತು.

ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಲವನ್ನೂರು ವೇಲಿಕಗತ್ತ ವೀಟಿಲ್ನ ಮಾರ್ಟಿನ್ ಡೊಮಿನಿಕ್ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಅನ್ನು ದುಬೈಯಲ್ಲಿ ಹಾಕಲಾಗಿತ್ತು ಅನ್ನುವ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈತ ಕಳೆದ 15 ವರ್ಷಗಳಿಂದ ದುಬೈಯಲ್ಲಿ ಎಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿದ್ದು 2 ತಿಂಗಳ ಹಿಂದೆಯಷ್ಟೇ ವಾಪಸಾಗಿದ್ದ. ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುವಾಗ ಆತನಿಗೆ ದುಬಾೖಯಲ್ಲಿ ಯಾರಾದರೂ ನೆರವು ನೀಡಿದ್ದಾರೆಯೇ ? ನೀಡಿದ್ದರೆ ಯಾರು ? ಇತ್ಯಾದಿ ವಿಚಾರಗಳ ಬಗ್ಗೆ ಎನ್ಐಎ ಸಮಗ್ರ ತನಿಖೆ ನಡೆಸುತ್ತಿದೆ ಅಂತ ಹೇಳಲಾಗುತ್ತಿದೆ.

ಇನ್ನು ಈ ಪ್ರಕರಣದಲ್ಲಿ ಆತನ ಪತ್ನಿಯನ್ನು ಕೂಡ ವಿಚಾರಣೆಗೆ ಒಳಪಡಿಲಾಗಿದ್ದು ಆಕೆ ಡೊಮಿನಿಕ್ ಗೆ ಬಾಂಬ್ ಸ್ಫೋಟದ ಹಿಂದಿನ ದಿನ ರಾತ್ರಿ ಮಾರ್ಟಿನ್ಗೆ ಫೋನ್ ಕರೆ ಬಂದಿತ್ತು. ಅದು ಯಾರು ಎಂದು ಪ್ರಶ್ನಿಸಿದಾಗ ಮಾರ್ಟನ್ ಡೊಮಿನಿಕ್ ಸಿಡಿಮಿಡಿಗೊಂಡಿದ್ದನೆಂದು ಆತನ ಪತ್ನಿ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದಾಳೆ.

ಈ ಹಿನ್ನೆಲೆ ಫೋನ್ ಕರೆಯನ್ನು ಕೇಂದ್ರೀಕರಿಸಿ ತನಿಖಾ ತಂಡ ತನಿಖೆಯನ್ನು ನಡೆಸುತ್ತಿದೆ.ಸದ್ಯ ಬಂಧಿತ ಆರೋಪಿ ಮಾರ್ಟಿನ್‌ ಡೊಮಿನಿಕ್‌ನನ್ನು ವಿವಿಧೆಡೆಗಳಿಗೆ ಸಾಗಿಸಿ ಅಗತ್ಯದ ಮಾಹಿತಿಗಳನ್ನು ತನಿಖಾ ತಂಡ ಸಂಗ್ರಹಿಸುತ್ತಿದೆ. ಆ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎರ್ನಾಕುಳಂ ಜಿಲ್ಲೆಯ ಕಾರಾಗೃಹದಲ್ಲಿ ಇರಿಸಲಾಗಿದೆ.