Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೆಜಿಗೆ 3-4 ರೂ. ಗೆ ಮಾರಾಟ: ಧಿಡೀರನೆ ಕುಸಿದ ಈರುಳ್ಳಿ ಬೆಲೆ

ದಾವಣಗೆರೆ: ಭೀಕರ ಬರಗಾಲದ ನಡುವೆಯೂ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಆದರೆ ಈಗ ಬೆಲೆ ಕುಸಿತವಾಗಿದ್ದು ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ.ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಜಾತಪಕ್ಷಿಯಂತೆ ಕಾಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆಜಿಗೆ ಈರುಳ್ಳಿ ಬೆಲೆ 3-4 ರೂ. ಆಗಿದೆ.

ಕಳೆದ ಕೆಲ ತಿಂಗಳ ಹಿಂದೆ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಇದೀಗ ಈರಳ್ಳಿ ಬೆಲೆ ದಿಢೀರ್​ ಅಂತ ಕುಸಿದ ಹಿನ್ನಲೆ ರೈತರಿಗೆ ದಿಕ್ಕು ತೋಚದಂತಾಗಿದೆ.ದಾವಣಗೆರೆ ಜಿಲ್ಲೆ ರೈತರು ಸಾಕಷ್ಟು ಈರುಳ್ಳಿ ಬೆಳೆದಿದ್ದು, ಮಾರಲು ಎಪಿಎಂಸಿ ಮಾರುಕಟ್ಟೆಗೆ ಬಂದರೆ ಬೆಲೆ ಕುಸಿದಿದೆ. ಮಾರುಕಟ್ಟೆಗೆ ಒಂದೇ ದಿನ ಆರು ಸಾವಿರ ಚೀಲ ಈರುಳ್ಳಿ ಬಂದಿದೆ.ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ಸದ್ಯ ಲಾರಿ ಬಾಡಿಗೆ ಕೊಡುವಷ್ಟು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ ರೈತರು. ದರ ಹೆಚ್ಚಾಗಬಹುದೆಂದು ರೈತರು ಕಳೆದ 2-3 ದಿನಗಳಿಂದ ಕಾಯ್ದು ಕುಳಿತಿದ್ದಾರೆ.

ಈರುಳ್ಳಿ ದರ ಪ್ರತಿ ಕ್ವಿಂಟಾಲ್​ಗೆ 1500 ರೂಪಾಯಿ ಇದೆ. ಅತ್ಯುತ್ತಮ ದತ್ತ ಈರುಳ್ಳಿ ಬೆಲೆ 1200 ರಿಂದ 1400 ರೂ. ಇದೆ. ಉತ್ತನ ದಪ್ಪ 1000 ರಿಂದ 1100 ರೂ. ಇದೆ.ಇನ್ನು ಮಧ್ಯಮ‌ ಗಾತ್ರದ ಈರುಳ್ಳಿ 700 ರಿಂದ 800, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ಇದೆ.ಸರ್ಕಾರ ರಪ್ತು ನಿಲ್ಲಿಸಿದ್ದರಿಂದ ಈರುಳ್ಳಿ ಬೆಲೆ ಕುಸಿದಿದೆ. ಹೀಗಾಗಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.