Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನ

 

ಹೊಸಪೇಟೆ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2023-24ನೇ ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನೀಡಲು ಮಾನ್ಯತೆ ಪಡೆದ ಅರ್ಹ ಸ್ವಯಂ ಸೇವಾ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ನೀಡುವ ಸಂಸ್ಥೆಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವೆಬ್‌ಸೈಟ್  kaushalkar.com ನಲ್ಲಿ ನೋಂದಣಿಯಾಗಿರಬೇಕು ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಅಕ್ರಿಡಿಟೇಶನ್ ಜಾಬ್ ರೋಲ್‌ಗಳಿಗೆ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿರಬೇಕು. ತರಬೇತಿ ಸಂಸ್ಥೆಯು ತರಬೇತಿ ನೀಡಲು ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ತರಬೇತಿ ನೀಡುವ ಚಟುವಟಿಕೆಗೆ ಸಂಬಂಧಿಸಿದಂತೆ ಸಂಸ್ಥೆಯವರು ಹೊಂದಿರುವ ಸ್ಥಳಾವಕಾಶದ ಮಾಹಿತಿ, ಯಂತ್ರೋಪಕರಣಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ಸಲ್ಲಿಸಬೇಕು. ತರಬೇತಿ ಸಂಸ್ಥೆಯು ಹೊಂದಿರುವ ಸ್ಥಳಾವಕಾಶ ಯಂತ್ರೋಪಕರಣಗಳ ಹಾಗೂ ಈ ಹಿಂದೆ ತರಬೇತಿ ನೀಡಿದ ಛಾಯಚಿತ್ರಗಳನ್ನು ಸಲ್ಲಿಸಬೇಕು.

ನೋಂದಣಿಯಾಗಿ ಅಕ್ರಿಡಿಟೇಶನ್ ಹೊಂದಿರುವ ತರಬೇತಿ ಸಂಸ್ಥೆಗಳು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ದ್ವೀಪ್ರತಿಯಲ್ಲಿ ನವೆಂಬರ್ 27ರ ಸಂಜೆ 5 ಗಂಟೆಯೊಳಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 3ನೇ ಮಹಡಿ ರಾಜಪುರ ಸ್ಕೈ ಬಿಲ್ಡಿಂಗ್ ಕಾಲೇಜ್ ರಸ್ತೆ, ಟ್ರೆಂಡ್ಸ್ ಬಟ್ಟೆ ಅಂಗಡಿ ಎದುರುಗಡೆ, ಹೊಸಪೇಟೆ, ಇಲ್ಲಿಗೆ ಸಲ್ಲಿಸುವಂತೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.