Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಜರಾತ್‌ನಲ್ಲಿ ಪುತ್ರನ ಕೊಲೆ, ಆಸ್ಟ್ರೇಲಿಯಾದಲ್ಲಿ ಡ್ರಗ್ಸ್: ಲಂಡನ್ ನಲ್ಲಿ ಭಾರತ ಮೂಲದ ದಂಪತಿಗೆ 33 ವರ್ಷ ಜೈಲು

ಲಂಡನ್:ಬ್ರಿಟನ್ ನಲ್ಲಿ ವಾಸಿಸುವ ಭಾರತೀಯ ಮೂಲದ ದಂಪತಿಗೆ ಅರ್ಧ ಟನ್ ಗೂ ಹೆಚ್ಚು ಕೊಕೇನ್ ಅನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಿದ ಆರೋಪದಡಿ 33 ವರ್ಷಗಳ ಜೈಲು ಶಿಕ್ಷೆಯಾಗಿದೆ.

ಶಿಕ್ಷೆಗೀಡಾದ ದಂಪತಿಯನ್ನು ಈಲಿಂಗ್ನ ಹಾನ್ವೆಲ್ಮೂಲದ ಆರತಿ ಧೀರ್(59), ಕವಲ್ಜೀತ್ ಸಿನ್ಹಾ ರೈಜಾಡಾ (35) ಎಂದು ಬ್ರಿ ಟನ್ನ ರಾಷ್ಟ್ರೀ ಯ ಅಪರಾಧದಳ(ಎನ್ಸಿಎ) ಗುರುತಿಸಿದೆ.

ಮೇ 2021ರಲ್ಲಿ ಸಿಡ್ನಿ ಯಲ್ಲಿ 57 ಮಿಲಿಯನ್ ಪೌಂಡ್ ಕೊಕೇನ್ ಅನ್ನು ಆಸ್ಟ್ರೇ ಲಿಯಾ ಬಾರ್ಡರ್ ಫೋರ್ಸ್ ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು . ಧೀರ್ ಮತ್ತು ರೈಜಾದಾ ಇಬ್ಬರೂ ಹೀಥ್ರೂ ವಿಮಾನ ಸೇವೆಗಳ ಕಂಪನಿಯಲ್ಲಿ ಮೊದಲು ಉದ್ಯೋಗವನ್ನು ಹೊಂದಿದ್ದರು, ತಮ್ಮ ಅಕ್ರಮ ಚಟುವಟಿಕೆಗಳನ್ನು ಯಾರಿಗೂ ತಿಳಿಯದಂತೆ ವಿಮಾನ ನಿಲ್ದಾಣದ ಸರಕು ಸಾಗಣೆ ಕಾರ್ಯವಿಧಾನಗಳ ಆಂತರಿಕ ಜ್ಞಾನವನ್ನು ಬಳಸಿಕೊಂಡಿದ್ದರು.

ಕೊಲೆ ಕೇಸ್:

ಗುಜರಾತ್ ನಲ್ಲಿ11 ವರ್ಷದ ದತ್ತು ಪುತ್ರ ಗೋಪಾಲ್ ಸೆಜಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಈ ದಂಪತಿಗಳ ಹಸ್ತಾಂತರ ಕೋರಿತ್ತು. ಆದರೆ ಹಸ್ತಾಂತರವನ್ನು ಬ್ರಿಟನ್ ಕೋರ್ಟ್ ನಿರಾಕರಿಸಿತ್ತು.

ಭಾರತ ಬಾಲಕನನ್ನು ದತ್ತು ೨೦೧೫ರಲ್ಲಿ ದತ್ತು ತೆಗೆದುಕೊಂಡಿದ್ದ ದಂಪತಿ ಆತನ ಹೆಸರಿನಲ್ಲಿ ವಿಮೆ ಮಾಡಿಸಿದ್ದರು. ೨ ವರ್ಷಗಳ ಚೆನ್ನಾಗಿ ನೋಡಿಕೊಂಡು, ಭಾರತದಲ್ಲಿ ಸಂಬಂಧಿಕರ ಮನೆಗೆ ತೆರಳಿ ವಾಪಾಸ್ ಏರ್ ಪೋರ್ಟ್ ಗೆ ಬರುವ ವೇಳೆ ಆತನ ಕೊಲೆಯಾಗಿತ್ತು. ಪ್ರಕರಣ ತನಿಖೆ ನಡೆಸಿದಾಗ ಇದೆಲ್ಲವೂ ವಿಮೆ ಹಣಕ್ಕಾಗಿ ಆಡಿದ ನಾಟಕ ಎಂದು ಬಯಲಾಗಿತ್ತು.