Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಜರಾತ್ ನಲ್ಲಿ ವಸ್ತು ಪ್ರದರ್ಶನಕ್ಕೆ ಮೋದಿ ಚಾಲನೆ

ಗಾಂಧಿನಗರ: ಗುಜರಾತ್ನ ಗಾಂಧಿನಗರದಲ್ಲಿ ‘ವೈಬ್ರಂಟ್ ಗುಜರಾತ್’ ಜಾಗತಿಕ ಶೃಂಗಸಭೆ ಅಂಗವಾಗಿ ಏರ್ಪಡಿಸಿರುವ ಜಾಗತಿಕ ವಸ್ತು ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಹೆಲಿಪ್ಯಾಡ್ ಗ್ರೌಂಡ್ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸುಮಾರು 2 ಲಕ್ಷ ಚದರ ಮೀ. ವಿಸ್ತೀರ್ಣದಷ್ಟು ವಿಶಾಲ ಜಾಗದಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ.ಚಾಲನೆ ನೀಡಿದ ಬಳಿಕ ಗುಜಾರತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆ ಇತರೆ ಮಳಿಗೆಗೆ ಭೇಟಿ ನೀಡಿದ ಪ್ರಧಾನಿ ಅವರನ್ನು ನೂರಾರು ಕಾಲೇಜಿನ ವಿದ್ಯಾರ್ಥಿಗಳು ಸ್ವಾಗತಿಸಿದರು.

ಪ್ರಮುಖವಾಗಿ ಈ ಜಾಗತಿಕ ವಸ್ತು ಪ್ರದರ್ಶನದಲ್ಲಿ ಆಸ್ಟ್ರೇಲಿಯಾ, ತಾಂಜಾನಿಯ, ಮೊರೊಕ್ಕೊ, ಮೊಜಾಂಬಿಕ್, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಎಸ್ಟೋನಿಯ, ಬಾಂಗ್ಲಾದೇಶ, ಸಿಂಗಪುರ, ಯುಎಇ, ಯುಕೆ, ಜರ್ಮನಿ, ನಾರ್ವೆ, ಫಿನ್ಲೆಂಡ್, ನೆದರ್ಲೆಂಡ್ಸ್, ರಷ್ಯಾ, ರುವಾಂಡ, ಜಪಾನ್, ಇಂಡೊನೇಷ್ಯಾ ಮತ್ತು ವಿಯೆಟ್ನಾಂ ದೇಶಗಳು ತಮ್ಮಲ್ಲಿನ ಹೊಸ ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ಕುರಿತ ಮಾಹಿತಿಯನ್ನು ನೀಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ದೇಶಗಳ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ 1,000 ಕಂಪನಿಗಳು ಭಾಗ ವಸ್ತು ಪ್ರದರ್ಶನದಲ್ಲಿ ಮಹಿಳಾ ಸಬಲೀಕರಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಅಭಿವೃದ್ಧಿ, ಹೊಸ ತಂತ್ರಜ್ಞಾನ, ಹಸಿರು ಮತ್ತು ಸ್ಮಾರ್ಟ್ ಮೂಲಸೌಕರ್ಯ ಹಾಗೂ ಸುಸ್ಥಿರ ಇಂಧನ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಈ ವಸ್ತು ಪ್ರದರ್ಶನದಲ್ಲಿ ದೇಶಗಳ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ 1,000 ಕಂಪನಿಗಳು ಭಾಗವಹಿಸಿದ್ದವು. ಇನ್ನು ವೇಳದಲ್ಲಿ ಮಹಿಳಾ ಸಬಲೀಕರಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ, ಹೊಸ ತಂತ್ರಜ್ಞಾನ, ಹಸಿರು ಮತ್ತು ಸ್ಮಾರ್ಟ್ ಮೂಲಸೌಕರ್ಯ ಹಾಗೂ ಸುಸ್ಥಿರ ಇಂಧನ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಯಿತು.