Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗುಡ್‌ ನ್ಯೂಸ್‌: ಕೋಟಿಗಟ್ಟಲೆ ಮನೆಗಳಿಗೆ ಉಚಿತ ವಿದ್ಯುತ್‌

ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.  75,000 ಕೋಟಿ ರೂಫ್‌ಟಾಪ್‌  ಸೌರ ಯೋಜನೆಗೆ ಕೇಂದ್ರ ಗುರುವಾರ ಅನುಮೋದನೆ ನೀಡಿದ್ದು ಒಂದು ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.

2025 ರ ವೇಳೆಗೆ ಕೇಂದ್ರ ಕಚೇರಿಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದು ಈ ಯೋಜನೆಯ ಗುರಿ. ಈ ಯೋಜನೆಯಿಂದ ಕೋಟಿಗಟ್ಟಲೆ ಮನೆಗಳಿಗೆ ಉಚಿತ ವಿದ್ಯುತ್‌ ನೀಡಲಾಗುವುದು.

ಈ ಯೋಜನೆಯಡಿಯಲ್ಲಿ ಒಂಂದು ಕೋಟಿ ಕುಟುಂಬಗಳು 300 ಯೂನಿಟ್‌ಗಳ ಉಚಿತ ವಿದ್ಯುತ್‌ ಪಡೆಯುತ್ತವೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.