Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹಲಕ್ಷ್ಮಿ 5ನೇ ಕಂತಿನ ಹಣ ಇಂದು ಬಿಡುಗಡೆ..!

ಈ ಕೆಲಸ ಮಾಡದೆ ಇದ್ರೆ ಅಕೌಂಟ್ ಗೆ ಬರುವುದಿಲ್ಲ ಹಣ!

ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಮೊದಲು ನಿಮ್ಮ ಬ್ಯಾಂಕ್‌ ಖಾತೆಗೆ ಕೆವೈಸಿ ಆಗಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಾಕಷ್ಟು ಜನ ಆಧಾರ್‌ ಲಿಂಕ್‌ (Aadhaar link) ಮಾಡಿಕೊಳ್ಳದೆ ಇರುವುದರಿಂದ ಹಣ ಜಮಾ ಆಗಿಲ್ಲ.

ಇದರ ಜೊತೆಗೆ ಸಾಕಷ್ಟು ಮಹಿಳೆಯರು ಬ್ಯಾಂಕ್‌ನಲ್ಲಿ ಖಾತೆ ಹೊಂದಿರುತ್ತಾರೆ ಆದರೆ ಅದನ್ನು ಅಪ್ಡೇಟ್‌ ಮಾಡಿಸಿರುವುದಿಲ್ಲ. ಈಗ ಸರ್ಕಾರ ಇದಕ್ಕೆ ಮಹತ್ವದ ಸೂಚನೆಯನ್ನು ನೀಡಿದ್ದು, ಎಲ್ಲಾ ಫಲಾನುಭವಿಗಳಿಗೆ 5 ನೇ ಕಂತಿನ ಹಣ ಖಾತೆಗೆ ಜಮಾ ಆಗಬೇಕೆಂದರೆ ಬ್ಯಾಂಕ್‌ ಖಾತೆಯನ್ನು ಅಪ್ಡೇಟ್‌ ಮಾಡಿಸಿಕೊಳ್ಳುವುದು ಕಡ್ಡಾಯ ಮಾಡಿದೆ.

ಇದಕ್ಕೆ ನೀವು ನೇರವಾಗಿ ಬ್ಯಾಂಕ್‌ಗೆ ಹೋಗಿ, ನಿಮ್ಮ ರೇಷನ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಇತ್ಯಾದಿ ದಾಖಲೆಗಳನ್ನು ನೀಡಿ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಿ.

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 70 ರಿಂದ 80 ಸಾವಿರ ಖಾತೆಗಳನ್ನು ಹೋಲ್ಡ್‌ ಮಾಡಿ ನಿಷ್ಕ್ರಿಯಗೊಳಿಸಲಾಗಿದೆ. ನೀವೇ ಸ್ವತಃ ಹೋಗಿ ಹೋಲ್ಡ್ ನಲ್ಲಿ ಇರುವ ಖಾತೆಯನ್ನು ಸಕ್ರಿಯ (activate) ಗೊಳಿಸಿಕೊಳ್ಳಬಹುದು.

5ನೇ ಕಂತಿನ ಹಣ ಜಮಾ!

ಜನವರಿ 20ನೇ ತಾರೀಖಿನ ಒಳಗೆ, 5 ನೇ ಕಂತಿನ ಹಣ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದ್ದು, ಈಗ ಸಂಕ್ರಾಂತಿ ಗಿಫ್ಟ್‌ ಎನ್ನುವಂತೆ 15 ನೇ ತಾರೀಖಿನಿಂದ 5 ನೇ ಕಂತಿನ ಹಣ ಬಿಡುಗಡೆ ಆರಂಭವಾಗಲಿದೆ. 5ನೇ ಕಂತಿನ ಹಣವನ್ನು ಜ. 30ರ ಒಳಗೆ ಹಂತ ಹಂತವಾಗಿ ಒಂದೊಂದು ಜಿಲ್ಲೆಯ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು.

ರದ್ದಾಗಿದೆ ರೇಷನ್ ಕಾರ್ಡ್!

2016 ಮಾನದಂಡಗಳನ್ನು ನಿರ್ಲಕ್ಷಿಸಿ ಯಾರೆಲ್ಲ ರೇಷನ್‌ ಕಾರ್ಡ್‌ ಪಡೆದುಕೊಂಡಿದ್ದಾರೋ ಅಂತವರ ರೇಷನ್‌ ಕಾರ್ಡ್‌ ಅನ್ನು ಕ್ಯಾನ್ಸಲ್‌ ಮಾಡಲಾಗುವುದು ಎಂದು ಅಹಾರ ಇಲಾಖೆ ಸಚಿವ ಕೆ ಎಚ್‌ ಮುನಿಯಪ್ಪ ತಿಳಿಸಿದ್ದಾರೆ.

ಒಂದು ವೇಳೆ ನಿಮ್ಮ ಕಾರ್ಡ್‌ ಕೂಡ ರದ್ದಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುವುದಿಲ್ಲ. ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಿದೆಯೋ ಇಲ್ಲವೋ ಎಂದು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್‌ ಗೆ ಹೋಗಿ ತಿಳಿದುಕೊಳ್ಳಬಹುದು.