Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣಾ ಬಾಂಡ್‌ ವಿವಾದಕ್ಕೆ ಪ್ರಧಾನಿ ಮೋದಿ ಕೊಟ್ಟ ಉತ್ತರ ಏನು : ವಿಶೇಷ ಸಂದರ್ಶನಲ್ಲಿ ಅಚ್ಚರಿಯ ಮಾಹಿತಿ ರಿವೀಲ್

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ. ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ. 2047 ವಿಕಸಿತ ಭಾರತ ಸಂಕಲ್ಪ. 3ನೇ ಅವಧಿಯಲ್ಲಿ ಅಭಿವೃದ್ಧಿಗೆ ವೇಗ. ಜನರಿಗೆ ಕಮಿಟ್​ಮೆಂಟ್​​ ಗ್ಯಾರಂಟಿ. ದಕ್ಷಿಣ ಮತ್ತು ಉತ್ತರ ಭೇದಭಾವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆಯ ಕುರಿತು ವಿರೋಧ ಪಕ್ಷಗಳು ಸುಳ್ಳು ಹರಡುತ್ತಿವೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದರ ಪ್ರಾಮಾಣಿಕ ಪ್ರತಿಫಲನವಾದಾಗ ಎಲ್ಲರೂ ವಿಷಾದಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಚುನಾವಣೆಯಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವ ಗುರಿಯನ್ನು ಚುನಾವಣಾ ಬಾಂಡ್ ಯೋಜನೆ ಹೊಂದಿತ್ತು.

ಆರೋಪಗಳನ್ನು ಹೊರಿಸಿ ಪರಾರಿಯಾಗುವುದನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡ ನಂತರ 16 ಸಂಸ್ಥೆಗಳು ನೀಡಿರುವ ದೇಣಿಗೆಯ ಪೈಕಿ ಶೇ. 37ರಷ್ಟು ಮಾತ್ರ ಬಿಜೆಪಿಗೆ ಬಂದಿದ್ದರೆ, ಉಳಿದ ಶೇ. 63ರಷ್ಟು ದೇಣಿಗೆ ಬಿಜೆಪಿಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳಿಗೆ ಹೋಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಚುನಾವಣಾ ಬಾಂಡ್ ಯೋಜನೆ ರದ್ದತಿಯಿಂದ ಚುನಾವಣೆಗಳು ಕಪ್ಪು ಹಣದತ್ತ ಹೊರಳಲಿದೆ.

ಎಲ್ಲರೂ ಇದಕ್ಕಾಗಿ ವಿಷಾದಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ. ಇದೇ ಪ್ರಥಮ ಬಾರಿಗೆ ಚುನಾವಣಾ ಬಾಂಡ್ ಯೋಜನೆಯ ಕುರಿತು ವಿಸ್ತೃತ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ಯಾರು ದೇಣಿಗೆ ನೀಡಿದ್ದಾರೆ ಎಂಬ ಜಾಡನ್ನು ಹಿಡಿಯಲು ಸಾಧ್ಯವಿರುವುದರಿಂದ ಇದನ್ನು ಯಶಸ್ಸಿನ ಕತೆಯನ್ನಾಗಿ ನೋಡಬೇಕು ಎಂದು ಹೇಳಿದ್ದು, ಈ ಯೋಜನೆಯನ್ನು ಸುಧಾರಿಸಲು ಸಾಕಷ್ಟು ಅವಕಾಶವಿದೆ ಎಂದೂ ಹೇಳಿದ್ದಾರೆ.

ಚುನಾವಣಾ ಬಾಂಡ್ ಯೋಜನೆಯ ಅಸಾಂವಿಧಾನಿಕ ಎಂದು ಕಳೆದ ಫೆಬ್ರವರಿಯಲ್ಲಿ ಘೋಷಿಸಿದ್ದ ಸುಪ್ರೀಂ ಕೋರ್ಟ್, ಈ ಯೋಜನೆಯನ್ನು ರದ್ದುಗೊಳಿಸಿತ್ತು.ಇನ್ನು ಮುಂದೆ ಚುನಾವಣಾ ಬಾಂಡ್ ವಿತರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.