Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜನೌಷಧಿ ಕೇಂದ್ರ ನಡೆಸಲು “ಡಿ”ಫಾರ್ಮ್, “ಬಿ”ಫಾರ್ಮ್ ಪದವೀಧರರಿಂದ ಅರ್ಜಿ ಆಹ್ವಾನ.!

 

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಈ ಕೇಂದ್ರಗಳನ್ನು ನಡೆಸಲು “ಡಿ” ಫಾರ್ಮ್, “ಬಿ” ಫಾರ್ಮ್ ಪದವೀಧರರು ಬೇಕಾಗಿದ್ದಾರೆ. ಈ ಪ್ರಕಟಣೆಯ ನಂತರದ 15 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ತಿಂಗಳಿಗೆ ಸಂಭಾವನೆ 10,000-15,000 ರೂ/- ನೀಡಲಾಗುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ: ಮುಖ್ಯಕಾರ್ಯನಿರ್ವಾಹಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಹೊಸದುರ್ಗ ರೋಡ್ , ಹೊಸದುರ್ಗ ತಾ|| ಮೊ. 9483653725,  ಆದಿವಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಹಿರಿಯೂರು ಮೊ.9242475799, ಆರನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಹಿರಿಯೂರು ಮೊ.9901762378, ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,ಮೊಳಕಾಲ್ಮೂರುಮೊ. 7829417346, ತಳಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಚಳ್ಳಕೆರೆ, ಮೊ. 9945669740, ಚಿಕ್ಕಜಾಜೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ, ಹೊಳಲ್ಕೆರೆ, ಮೊ. 9036204976 ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ದೂರವಾಣಿ ಸಂಖ್ಯೆ 9945979177, 7829603638 ಗೆ ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.