Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜಾತಿಗಣತಿ ವರದಿ ಸ್ವೀಕಾರಕ್ಕೆ ಸಿದ್ದ.! ಸಿಎಂ ಸಿದ್ದರಾಮಯ್ಯ.!

 

ಚಿತ್ರದುರ್ಗ: ನಗರದ ಮಾದಾರ ಚನ್ನಯ್ಯ ಮಠದ ಬಳಿ ಮೈದಾನದಲ್ಲಿ ನಡೆದ ಶೋಷಿತರ ಜಾಗೃತಿ ​​ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಜಾತಿ‌ಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ಐತಿಹಾಸಿಕ ಸಮಾವೇಶ. ಶೋಷಣೆ ನಡೆಯುತ್ತಲೇ ಇದೆ, ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಣೆ ನಡೆದಿದೆ. ಸಂವಿಧಾನದಿಂದಾಗಿ ಶೋಷಣೆ ಕಡಿಮೆಯಾಗಿದೆ. ಮೀಸಲಾತಿಯನ್ನ ಆರ್​​ಎಸ್​ಎಸ್, ಬಿಜೆಪಿ ವಿರೋಧ ಮಾಡುತ್ತಿದೆ. ಕೆಲವು ಶಕ್ತಿಗಳು ನನ್ನನ್ನು ವಿರೋಧ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.

ಕಾಂತರಾಜು ಸಮಿತಿ ಮಾಡಿದ್ದು ನಾನೇ. ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ಮಾಜಿ ಸಿಎಂಗಳಾದ ಹೆಚ್​ಡಿ. ಕುಮಾರಸ್ವಾಮಿ‌ ಮತ್ತು ಬಸವರಾಜ ಬೊಮ್ಮಾಯಿ ವರದಿ ಪಡೆಯಲಿಲ್ಲ. ಈಗ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತಾರೆ. ನೀವು ವರದಿ ಕೊಡಿ ಅಂತ ನಾನು ಹೇಳಿದ್ದೇನೆ. ಲೋಪದೋಷ ಇದ್ದರೆ ತಜ್ಞರ ಸಲಹೆ ಪಡೆಯುತ್ತೇನೆ ಎಂದರು.