Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜೇಡ ಕಚ್ಚಿ ಗಾಯಕ ಸಾವು, ಬ್ರೆಜಿಲಿಯನ್​​ ಸಿಂಗರ್ ಇನ್ನಿಲ್ಲ

ಜೇಡ ಕಡಿತದಿಂದ ಬ್ರೆಜಿಲ್‌ ಗಾಯಕ ಡಾರ್ಲಿನ್​ ಮೊರೈಸ್​ ತಮ್ಮ 28 ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಜೇಡ ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಆರೋಗ್ಯ ಸುಧಾರಿಸಿಕೊಂಡು ಡಿಸ್ಚಾರ್ಜ್​ ಕೂಡಾ ಆಗಿದ್ದರು. ಬಳಿಕ ವಿಪರೀತ ಆಯಾಸದಿಂದ ಬಳಲುತ್ತಿದ್ದರು. ಸಾವಿಗೂ ಮೊದಲು ಅವರ ದೇಹದ ಬಣ್ಣ ಬದಲಾಗಿತ್ತು ಎಂದು ಗಾಯಕನ ಪತ್ನಿ ಹೇಳಿದ್ದಾರೆ. ಅಕಾರ್ಡಿಯನ್​, ಜಬುಂಬಾ ಮತ್ತು ಲೋಹದ ವಾದ್ಯಗಳನ್ನು ಬಳಸುವ ಮೂಲಕ ಡಾರ್ಲಿನ್​ ಮೊರೈಸ್ ಗುರುತಿಸಿಕೊಂಡಿದ್ದರು.