Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಟ್ಯಾಕ್ಸಿಗಳ ಹಗಲು ದರೋಡೆಗೆ ಬ್ರೇಕ್ – ಏಕರೂಪ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದ ಸಾರಿಗೆ ಇಲಾಖೆ

ಮನಸ್ಸೋ ಇಚ್ಚೆ ದರ ವಿಧಿಸಿ ಹಗಲು ದರೋಡೆ ಮಾಡುತ್ತಿದ್ದ ಟ್ಯಾಕ್ಸಿಗಳಿಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ. ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಸಾರಿಗೆ ಇಲಾಖೆ ರಾಜ್ಯಾದ್ಯಂತ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿ ಮಾಡಿದೆ. ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕ ದರಗಳನ್ನು ಏಕರೂಪಗೊಳಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

2021ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ವಾಹನಗಳ ಮೌಲ್ಯ ಆಧರಿಸಿ ದರ ನಿಗದಿ ಮಾಡಿತ್ತು. ಸಿಟಿ ಟ್ಯಾಕ್ಸಿ ಸೇವೆಯನ್ನು ಎಬಿಸಿಡಿ ಎಂದು ವರ್ಗೀಕರಿಸಿ 2021ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ದರ ನಿಗದಿ ಮಾಡಿತ್ತು. ಆದ್ರೆ, ಫೆಬ್ರವರಿಯಿಂದಲೇ ಅಧಿಸೂಚನೆ ಹೊರಡಿಸಲಾಗಿದೆ. ಸಾರಿಗೆ ಸಚಿವರ ಸೂಚನೆ ಮೇರೆಗೆ ಏಕರೂಪ ಪ್ರಯಾಣ ದರ ನಿಗದಿಪಡಿಸಿ ಸರ್ಕಾರ ಆದೇಶ 1) 10 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 100 ರೂ. ನಿಗದಿ 2) 4 ಕಿಮೀ ನಂತರ ಪ್ರತಿ ಕಿಮೀಗೆ ಹೆಚ್ಚುವರಿ 24 ರೂ.ನಿಗದಿ 3) 10 ಲಕ್ಷದಿಂದ 15 ಲಕ್ಷ ರೂ.ವರೆಗಿನ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 115 ರೂ. ನಿಗದಿ 4) 4 ಕಿಮೀ ನಂತರ ಪ್ರತಿ 1 ಕಿಮೀಗೆ ಹೆಚ್ಚುವರಿ 28 ರೂ. ನಿಗದಿ 5)15 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ವಾಹನಗಳಿಗೆ 4 ಕಿಮೀ ವರೆಗೆ ಕನಿಷ್ಠ 130 ರೂ. ನಿಗದಿ 6) 4 ಕಿಮೀ ನಂತರ ಪ್ರತಿ ಕಿಲೋ ಮೀಟರ್‌ಗೆ ಹೆಚ್ಚುವರಿ 32 ರೂ. ನಿಗದಿ ಹೊಸ ನಿಯಮಗಳೇನು? 1) ವೈಯಕ್ತಿಕ ಲಗೇಜುಗಳಿಗೆ 120 ಕೆಜಿ ವರೆಗೆ ವಿನಾಯಿತಿ 2) ಮೊದಲ 5 ನಿಮಿಷ ಕಾಯುವಿಕೆಗೆ ಶುಲ್ಕ ಇಲ್ಲ 3) ಪ್ರಯಾಣಿಕರಿಂದ ಜಿಎಸ್‌ಟಿ, ಟೋಲ್‌ ವಸೂಲಿಗೆ ಅವಕಾಶ 4) ಬೆಳಗಿನ ಜಾವ 6 ಗಂಟೆ ವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ 10% ಹೆಚ್ಚುವರಿ ದರ ವಿಧಿಸಲು ಅವಕಾಶ ನೀಡಲಾಗಿದೆ.