Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಂಬಾಕು-ಪಾನ್ ಪ್ರಿಯರಿಗೆ ಬಿಗ್‌ ಅಲರ್ಟ್‌.! ಈ ರೂಲ್ಸ್‌ ಫಾಲೋ ಮಾಡದಿದ್ರೆ ಏ.1 ರಿಂದ 1 ಲಕ್ಷ ರೂ. ದಂಡ

ಪಾನ್ ಮಸಾಲಾ, ತಂಬಾಕು & ಗುಟ್ಕಾ ಉತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಏಪ್ರಿಲ್ 1 ರಿಂದ ಭಾರೀ ದಂಡವನ್ನು ಎದುರಿಸುತ್ತವೆ. GST ಕೌನ್ಸಿಲ್ ಇಂದು ಈ ಕುರಿತು ಹೊಸ ಸಲಹೆಯನ್ನು ನೀಡಿದೆ, ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. GST ನೀಡಿದ ಸಲಹೆಯ ಪ್ರಕಾರವಾಗಿ, ತಂಬಾಕು ಉತ್ಪನ್ನವನ್ನು ತಯಾರಿಸುವ ಕಂಪನಿಗಳು ತಮ್ಮ ಪ್ಯಾಕಿಂಗ್ ಯಂತ್ರವನ್ನು ಏಪ್ರಿಲ್ 1 ರಿಂದ GST ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ತಂಬಾಕು ಉತ್ಪನ್ನ ಕಂಪನಿಯು ತನ್ನ ಪ್ಯಾಕಿಂಗ್ ಯಂತ್ರೋಪಕರಣಗಳನ್ನು GST ಅಧಿಕಾರಿಗಳೊಂದಿಗೆ ನೋಂದಾಯಿಸಲು ವಿಫಲವಾದಲ್ಲಿ ಅವು 1 ಲಕ್ಷ ರೂ. ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಮಸೂದೆಯಲ್ಲಿ ತಿದ್ದುಪಡಿಯನ್ನು ಮಾಡಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು
ತಂಬಾಕು ಉತ್ಪಾದನಾ ವಲಯದಲ್ಲಿ ಆದಾಯ ಸೋರಿಕೆ ತಡೆಯಲು ಸರ್ಕಾರದ ಈ ಕ್ರಮದ ಉದ್ದೇಶವಾಗಿದೆ. ಹಣಕಾಸು ಮಸೂದೆ, 2024 ಕೇಂದ್ರ GST ಕಾಯ್ದೆಗೆ ತಿದ್ದುಪಡಿಯನ್ನು ಪರಿಚಯಿಸಿದೆ, ಅಲ್ಲಿ ನೋಂದಾವಣೆ ಮಾಡಿದ ಪ್ರತಿ ಯಂತ್ರಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ
GST ಕೌನ್ಸಿಲ್‌ನ ಶಿಫಾರಸಿನ ಆಧಾರದ ಮೇಲೆ ತೆರಿಗೆ ಅಧಿಕಾರಿಗಳು ಕಳೆದ ವರ್ಷ ತಂಬಾಕು ತಯಾರಕರಿಂದ ಯಂತ್ರಗಳ ನೋಂದಣಿ ಮಾಡಲು ವಿಶೇಷ ಪ್ರಕ್ರಿಯೆಯನ್ನು ಪರಿಚಯಿಸಿದೆ. ಅಸ್ತಿತ್ವದಲ್ಲಿರುವ ಪ್ಯಾಕಿಂಗ್ ಯಂತ್ರಗಳ ವಿವರ, ಈ ಯಂತ್ರಗಳ ಪ್ಯಾಕಿಂಗ್ ಸಾಮರ್ಥ್ಯದೊಂದಿಗೆ ಹೊಸದಾಗಿ ಸ್ಥಾಪಿಸಲಾದ ಯಂತ್ರ ನಮೂನೆ GST SRM-I ನಲ್ಲಿ ನೀಡಬೇಕು.

ಕಳೆದ ವರ್ಷದವರೆಗೂ ನೋಂದಣಿ ಮಾಡಿಕೊಳ್ಳದವರಿಗೆ ಯಾವುದೇ ದಂಡ ವಿಧಿಸಲಾಗುತ್ತಿರಲಿಲ್ಲ ಎಂದು ಮಲ್ಹೋತ್ರಾ ಮಾಧ್ಯಮಗಳಿಗೆ ಹೇಳಿದ್ದಾರೆ. ಸದ್ಯ ಇದಕ್ಕೆ ಸ್ವಲ್ಪ ದಂಡ ವಿಧಿಸಬೇಕು ಎಂದು ಕೌನ್ಸಿಲ್ ತೀರ್ಮಾನಿಸಿದೆ. ಈ ಕಾರಣಕ್ಕಾಗಿ ಈಗ ನೋಂದಣಿ ಮಾಡದವರಿಗೆ 1 ಲಕ್ಷ ದಂಡ ವಿಧಿಸಲಾಗುವುದು.