Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಾಯಿಯ ಶವದೊಂದಿಗೆ ವರ್ಷದಿಂದ ಪುತ್ರಿಯರಿಬ್ಬರ ವಾಸ!

ಉತ್ತರ ಪ್ರದೇಶ: ಪ್ರದೇಶದ ವಾರಾಣಸಿಯಲ್ಲಿ ತಾಯಿಯ ಶವದೊಂದಿಗೆ ಕಳೆದ ಇಬ್ಬರು ಸಹೋದರಿಯರು ವಾಸಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಉಷಾ ದೇವಿ (52)ಎಂಬವರು ಮೃತ ಮಹಿಳೆಯಾಗಿದ್ದಾರೆ. ಪಲ್ಲವಿ ತ್ರಿಪಾಠಿ (27) ಮತ್ತು ವೈಶ್ವಿಕ್ ತ್ರಿಪಾಠಿ (17) ಮೃತ ಮಹಿಳೆಯ ಮಕ್ಕಳಾಗಿದ್ದಾರೆ.

ಡಿಸೆಂಬರ್ 8, 2022 ರದು ಉಷಾ ದೇವಿಯವರು ನಗರದ ಮದರ್ವಾ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಸಾವನ್ನಪ್ಪಿದರು. ಆದರೆ ಅವರ ಹೆಣ್ಣುಮಕ್ಕಳು ಹಣಕಾಸಿನ ಅಡಚಣೆಯಿಂದ ಅಂತಿಮ ವಿಧಿಗಳನ್ನು ಮಾಡಲಿಲ್ಲ. ಆಕೆಯ ಬಗ್ಗೆ ಯಾರಿಗೂ ತಿಳಿಸದೆ ಆಕೆಯ ಶವದೊಂದಿಗೆ ವಾಸಿಸುತ್ತಿದ್ದರು.

ಕೆಲ ದಿನಗಳಿಂದ ಮನೆ ಬಾಗಿಲು ಮುಚ್ಚಿದ್ದು, ಹೆಣ್ಣುಮಕ್ಕಳು ಕೂಡ ಕಾಣಿಸಿರಲಿಲ್ಲ. ಆಗ ಅವರ ಸಂಬಂಧಿಕರಿಗೆ ಪಕ್ಕದ ಮನೆಯವರು ವಿಚಾರ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಹೊರತೆಗೆದರು. ಆಗ ಶವದ ಪಕ್ಕದಲ್ಲಿ ಇಬ್ಬರು ಹೆಣ್ಣುಮಕ್ಕಳು ಕುಳಿತಿದ್ದರು. ದೇಹದ ಕಟುವಾದ ವಾಸನೆಯನ್ನು ಮರೆಮಾಚಲು ಪುತ್ರಿಯರಿಬ್ಬರು ಅಗರಬತ್ತಿಗಳನ್ನು ಹಚ್ಚುತ್ತಿದ್ದರು.

ಇನ್ನು ಮಹಿಳೆಯ ಪತಿ ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಪತ್ನಿ ಸತ್ತರೂ ಮನೆಗೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಪತ್ತೆ ಹಚ್ಚಿದ ಪೊಲೀಸರು ಇಬ್ಬರೂ ಹೆಣ್ಣುಮಕ್ಕಳನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ಇನ್ನೇಷ್ಟೇ ಲಭ್ಯವಾಗಬೇಕಿದೆ.