Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಜಿ ಆಹ್ವಾನ

ತೆಂಗಿನ ಮರ ಏರುವ ವೃತ್ತಿಪರ ಕೌಶಲ್ಯದಾರರಿಗೆ ರೂ 5 ಲಕ್ಷದವರೆಗೆ ವಿಮಾ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

ಯೋಜನೆಯ ವಿವರ:

ತೆಂಗು ಅಭಿವೃದ್ದಿ ಮಂಡಳಿವತಿಯಿಂದ ವಿಮಾ ಕಂಪನಿ ಸಹಯೋಗದೊಂದಿಗೆ ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು/ ಕೃಷಿ ಕಾರ್ಮಿಕರು ತೆಂಗಿನ ತೋಟದಲ್ಲಿ ಕೆಲಸ ಮಾಡುವಾಗ ಅಕಸ್ಮಿಕ ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ/ ಅಂಗವಿಕಲರಾಗಿದ್ದಲ್ಲಿ ವಿವಿಧ ಹಂತದಲ್ಲಿ ವಿಮೆಯನ್ನು ನೀಡಲು “ಕೇರಾ ಸುರಕ್ಷಾ ಯೋಜನೆಯನ್ನು”  ಅನುಷ್ಥಾನ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2024 

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಲು ಅರ್ಜಿಯನ್ನು ಪೊಸ್ಟ್ ಮೂಲಕ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡಬೇಕು.ಪ್ರಾದೇಶಕ ಕಚೇರಿ: ನಿರ್ದೇಶಕರು, ತೆಂಗು ಅಭೀವೃದ್ದಿ ಮಂಡಳಿ, ಹುಳಿಮಾವು, ಬನ್ನೇರು ಘಟ್ಟ ರಸ್ತೆ, ಬೆಂಗಳೂರು-560076 ದೂರವಾಣಿ ಸಂಖ್ಯೆ: 080-26593750, 808-26593743 ಅಥವಾ ನಿಮ್ಮ ಹತ್ತಿರದ ತೆಂಗು ಬೆಳೆಗಾರರ ಸಂಘದ ಕಚೇರಿಯನ್ನು ಭೇಟಿ ಮಾಡಿಯು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

1) ಅರ್ಜಿ ನಮೂನೆ.

2) ಅರ್ಜಿದಾರರ ವಯಸ್ಸಿನ ಪುರಾವೆ ಪತ್ರ ನೀಡಬೇಕು. (ಅರ್ಜಿದಾರರ ವಯಸ್ಸು 18- 65 ರ ನಡುವೆ ಇರಬೇಕು).

3) ಆಧಾರ ಕಾರ್ಡ್ ಪ್ರತಿ.

4) ಬ್ಯಾಂಕ್ ಪಾಸ್ ಬುಕ್ ಪ್ರತಿ.

5) ರೈತರ ವಾರ್ಷಿಕ ವಂತಿಗೆ ಪಾವತಿಸಿದ ರಶೀದಿ (ತೆಂಗಿನ ಮರ ಹತ್ತುವವರು/ ತೆಂಗಿನ ಕಾಯಿ ಕೀಳುವವರು/ ನೀರಾ ತಂತ್ರಜ್ಞರು ವಾರ್ಷಿಕ ವಂತಿಗೆ  ರೂ. 94.00 ಅನ್ನು ಪಾವತಿಸಲು ಡಿಡಿ ಮೂಲಕ  Coconut Development Board, payble at Cochin ಪಾವತಿಸಬಹುದು. ಅಥವಾ NEFT/BHIM/Phone pay/ Google Pay/ PayTM/  ಮೂಲಕ State Bank of India, Iyyatti In, Ernakulam Branch (Acc No. 61124170321, IFSC code:SBIN0031449 ಗೆ ಪಾವತಿಸಬೇಕು.

ವಿಮಾ ಸೌಲಭ್ಯದ ವಿವರ:

ಸೌಲಭ್ಯದ ವಿವರ

ವಿಮೆಯ ಮೊತ್ತ ಮರಣ ಹೊಂದಿದಲ್ಲಿ 5,00,000.00,  ಶಾಶ್ವತ ಅಂಗವಿಕಲತೆ 2,50,00.00,  ಆಸ್ಪತ್ರೆ ವೆಚ್ಚದ ಮರುಪಾವತಿ (ಕನಿಷ್ಠ 24 ಗಂಟೆ ಆಸ್ಪತ್ರೆ ದಾಖಲಾಗಿದ್ದಲ್ಲಿ) 1,00,000.00,  ಆಂಬುಲೆನ್ಸ್ ವೆಚ್ಚ 3,000.00,  ಅಲ್ಪಕಾಲದ ಅಂಗಾಂಗ ಊನತೆ
18,000.00,  ಅಂತ್ಯ ಸಂಸ್ಕಾರದ ವೆಚ್ಚ 5,000.00