Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೆಹಲಿ ಯಲ್ಲಿ ಹೆಚ್ಚಾದ ವಾಯುಮಾಲಿನ್ಯ:ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ತ ಹೆಚ್ಚಾಗಿದ್ದು ಇದಕ್ಕೆ ಪಂಜಾಬ್ ರಾಜ್ಯ ಕಾರಣವಾಗಿದೆ ಕ ಎಂಬ ಆರೋಪ ವ್ಯಕ್ತವಾಗಿದೆ.

ಪಂಜಾಬ್ ನಲ್ಲಿ ಅತಿಯಾಗಿ ಒಣ ಹುಲ್ಲುಗಳನ್ನು ಸುಡುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ ಎನ್ನುವ ವಿಚಾರವನ್ನು ಈ ಹಿಂದೆ ದೆಹಲಿ ಸರ್ಕಾರ ತಿಳಿಸಿತ್ತು. ಆದರೂ ಪಂಜಾಬ್ ಸರ್ಕಾರ ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡಿರಲಿಲ್ಲ ಇದರಿಂದ ಪಂಜಾಬ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿದೆ.

ದೆಹಲಿಯ ವಾಯು ಮಾಲಿನ್ಯ ಹದಗೆಡಲು ಸುತ್ತಮುತ್ತಲಿನ ರಾಜ್ಯವೂ ಕಾರಣವಾಗಿದೆ ಎನ್ನಲಾಗುತ್ತಿದ್ದು, ಪಂಜಾಬ್​​​ನಲ್ಲಿ ವಿಪರೀತ ಹುಲ್ಲು ಸುಡುವುದರಿಂದ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಹಾಗಾಗಿ ಹುಲ್ಲು ಸುಡುವುದನ್ನು ಕಡಿಮೆ ಮಾಡಲು ದೆಹಲಿ ಸರ್ಕಾರ ಕೂಡ ಹೇಳಿತ್ತು.ಇದೀಗ ಸುಪ್ರೀಂ ಕೋರ್ಟ್ ಪಂಜಾಬ್​​​ ಸರ್ಕಾರವನ್ನು ಮಂಗಳವಾರದಂದು​​ ತರಾಟೆಗೆ ತೆಗೆದುಕೊಂಡಿದೆ.

“ನೀವು ಹೇಗೆ ಮಾಡುತ್ತೀರಿ ಎಂಬುದು ನನಗೆ ತಿಳಿದಿಲ್ಲ, ಆದರೆ ಹುಲ್ಲು ಸುಡುವಿಕೆಯನ್ನು ಕಡಿಮೆ ಮಾಡಲೇಬೇಕು ಅದು ನಿಮ್ಮ ಕೆಲಸ, ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಹಿಡಿಯಬೇಕು ಎಂದು ಪಂಜಾಬಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಪಂಜಾಬಿ ಸರ್ಕಾರವು ಒಣಹುಲ್ಲಿನ ಬಗ್ಗೆ ಅಲ್ಲಿನ ಜನರಿಗೆ ಜಾಗೃತಿಯನ್ನು ಮೂಡಿಸಿದ್ದೇವೆ. ಹಾಗೂ ಹುಲ್ಲು ಸುಡುವ ರೈತರ ವಿರುದ್ದ ವಿರುದ್ಧ ಕ್ರಮ ತೆಗೆದುಕೊಳ್ಳತ್ತಿದ್ದೇವೆ. ಅಂಕಿಅಂಶಗಳ ಪ್ರಕಾರ, ಇದುವರೆಗೆ 1694 ರೈತರಿಗೆ ಹುಲ್ಲು ಸುಟ್ಟ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅವರಿಗೆ 45.53 ಲಕ್ಷ ರೂ ದಂಡವನ್ನು ಕೂಡ ವಿಧಿಸಲಾಗಿದೆ ಎಂದು ಆದರ್ಶ್ ಪಾಲ್ ಸಿಂಗ್ ಹೇಳಿದ್ದಾರೆ.