Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದ ಕೃಷಿಕರಿಗೆ ಶಾಕಿಂಗ್ ನ್ಯೂಸ್!! – ರಸಗೊಬ್ಬರ ಮೇಲಿನ ರಿಯಾಯಿತಿ ರದ್ದು ಪಡಿಸಿದ ರಷ್ಯಾ : ಭಾರತದಲ್ಲಿ ದರ ಏರಿಕೆ ಆತಂಕ

ಭಾರತದಲ್ಲಿ ರಸಗೊಬ್ಬರದ ದರ ಏರಿಕೆಯಾಗಲಿದೆಯೇ? ಹೀಗೊಂದು ಆತಂಕ ರೈತರಲ್ಲಿ ಕಾಡುತ್ತಿದೆ. ಯಾಕೆಂದರೆ ರಷ್ಯಾದ ರಸಗೊಬ್ಬರ ಕಂಪೆನಿಗಳು ಇದುವರೆಗೆ ಭಾರತಕ್ಕೆ ನಿಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಇದು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಷ್ಯಾದ ಕಂಪೆನಿಗಳು ಡೈ ಅಮೋನಿಯಂ ಪಾಸ್ಪೇಟ್ (ಡಿಎಪಿ) ಸೇರಿ ವಿವಿಧ ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಹಿಂಪಡೆದಿವೆ. ಇದರಿಂದ ಭಾರತಕ್ಕೆ ಆಮದು ವೆಚ್ಚ ಅಧಿಕವಾಗಲಿದೆ.

ಸದ್ಯ ಭಾರತದಲ್ಲಿ ಯೂರಿಯಾ ಪ್ರತಿ ಚೀಲಕ್ಕೆ 266 ರೂ., ಡಿಎಪಿ 1,350 ರೂ. ಮತ್ತು ಪೊಟ್ಯಾಶಿಯಂ 1,700 ರೂ. ಸರಕಾರಿ ಸಬ್ಸಿಡಿ ಸಹಿತ ಮಾರಾಟವಾಗುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತ ರಷ್ಯಾದಿಂದ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣದಲ್ಲಿ ಶೇ. 246ರಷ್ಟು ಹೆಚ್ಚಳವಾಗಿತ್ತು.

ರಷ್ಯಾದ ಕಂಪೆನಿಗಳು ಡಿಎಪಿ, ಯೂರಿಯಾ ಮತ್ತು ಎನ್‍ಪಿಕೆ ಗೊಬ್ಬರಗಳಿಗೆ ಭಾರೀ ರಿಯಾಯಿತಿ ಘೋಷಿಸಿ ಭಾರತಕ್ಕೆ ಮಾರಾಟ ಮಾಡುತ್ತಿದ್ದವು. ಆ ಮೂಲಕ ಚೀನಾ, ಈಜಿಪ್ಟ್, ಜೋರ್ಡಾನ್ ಮತ್ತು ಯುಎಇ ಗೊಬ್ಬರ ಕಂಪೆನಿಗಳನ್ನು ಮೀರಿ ರಷ್ಯಾ ಪಾರಮ್ಯ ಮೆರೆದುಕೊಂಡಿತ್ತು.