Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಕಲಿ ವೈದ್ಯರ ಹಾವಳಿ – ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ದಾಳಿ

ಕಲಬುರಗಿ: ರಾಜ್ಯದಲ್ಲೇ ಹಲವು ಕಡೆಗಳಲ್ಲಿ ನಕಲಿ ವೈದ್ಯರ ಹಾವಳಿಗಳು ಹೆಚ್ಚಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದಾರೆ.

KPME ಅನುಮತಿ ಪಡೆಯದೆ ಜನರಿಗೆ ಚಿಕಿತ್ಸೆಯನ್ನು ನೀಡುತ್ತಿರುವ ಈ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಲಬುರಗಿ ಜಿಲ್ಲೆಯಲ್ಲಿ 109 ನಕಲಿ ವೈದ್ಯರು ಪತ್ತೆಯಾಗಿದ್ಧಾರೆ.   43 ಕ್ಲಿನಿಕ್​ಗಳನ್ನು ಬಂದ್ ಮಾಡಿಸಲಾಗಿದೆ.

KPME ಅನುಮತಿ ಪಡೆಯದೆ ಚಿಕಿತ್ಸೆ ನೀಡ್ತಿರುವ ಕ್ಲಿನಿಕ್​ಗಳಿಗೆ ನೋಟಿಸ್ ಜಾರಿ ಮಾಡಿದ್ದು ಆದಷ್ಟು ಬೇಗ ಅನುಮತಿ ಪಡೆಯದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ‌ ನೀಡಲಾಗಿದೆ.