Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಟಿ ಕತ್ರಿನಾ ಕೈಫ್ ಅದ್ಭುತ ಡ್ಯಾನ್ಸರ್ ಆಗುವುದಕ್ಕೆ ಒಬ್ಬ ಸ್ವಾರ್ ನಟ ಕಾರಣ!

ಮುಂಬಯಿ:ಅದ್ಭುತ ಡ್ಯಾನ್ಸರ್ ಎನಿಸಿಕೊಂಡಿರುವ ನಟಿ ಕತ್ರಿನಾ ಕೈಫ್ ತಾನು ವೃತ್ತಿ ಪ್ರಾರಂಭಿಸಿದಾಗ ಅವರಿಗೆ ಡ್ಯಾನ್ಸ್ ಮಾಡೋದಕ್ಕೆ ಬರುತ್ತಿರಲಿಲ್ಲವಂತೆ.

ಈ ವಿಚಾರ ಆಶ್ಚರ್ಯವಾದ್ರೂ ಸತ್ಯ.ಹೌದು ಅವರು ಬಾಲಿವುಡ್ ಅಂಗಳದಲ್ಲಿ ಒಬ್ಬ ಉತ್ತಮ ಡ್ಯಾನ್ಸರ್‍ ಆಗುವುದಕ್ಕೆ ಕಾರಣವಾಗಿದ್ದು ದಕ್ಷಿಣ ಭಾರತದ ಸ್ಟಾರ್ ನಟನಾಗಿರುವ ಬಾಲಕೃಷ್ಣ ಅವರು.

ಕತ್ರಿನಾ ಕೈಫ್ ನಟನೆಗೆ ಪ್ರಾರಂಭದಲ್ಲಿ ಕಾಲಿರಿಸಿದ್ದು ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ‘ಮಲ್ಲೇಶ್ವರಿ’ ಮೂಲಕ.ಆ ಸಿನಿಮಾದ ಬಳಿಕ ಅವರಿಗೆ ಹಲವು ಆಫರ್ಗಳು ಬಂದವಂತೆ.

ಆದರೆ ಕತ್ರಿನಾ ಕೈಫ್ ಒಪ್ಪಿಕೊಂಡಿದ್ದು, ನಂದಮೂರಿ ಬಾಲಕೃಷ್ಣ ನಟಿಸಲಿದ್ದ ‘ಅಲ್ಲರಿ ಪಿಡುಗು’ ಸಿನಿಮಾ.ಬಾಲಕೃಷ್ಣ ತಮ್ಮ ಡೈಲಾಗ್, ಆಕ್ಷನ್ ಜೊತೆಗೆ ಡ್ಯಾನ್ಸ್ ನಿಂದಲೂ ಜನಪ್ರಿಯರು.ಅವರ ಸಿನಿಮಾಗಳಲ್ಲಿ ಡ್ಯಾನ್ಸ್ ಹೆಚ್ಚಾಗಿ ಇದ್ದೇ ಇರುತ್ತದೆ.

ಆದರೆ ಕತ್ರಿನಾ ಕೈಫ್ಗೆ ಡ್ಯಾನ್ಸ್ ಬರುತ್ತಿರಲಿಲ್ಲ. ಇದರಿಂದ ಕತ್ರಿನಾ ಕೈಫ್ ಅವರು ತೀವ್ರ ಸಮಸ್ಯೆಯನ್ನು ಎದುರಿಸಿದ್ದರಂತೆ.

ಎಲ್ಲರೂ ನನ್ನ ಡ್ಯಾನ್ಸ್ ಅನ್ನು ಟೀಕಿಸುತ್ತಿದ್ದರು. ಆದರೆ ಬಾಲಕೃಷ್ಣ ನನ್ನ ಬೆಂಬಲಕ್ಕೆ ನಿಂತರು, ಕ್ಯಾಮೆರಾ ಮುಂದೆ ಆಗಬಹುದಾದ ಅವಮಾನದಿಂದ ಕಾಪಾಡಿ, ಸರಳವಾದ ಸ್ಟೆಪ್ಗಳನ್ನೇ ನನಗೆ ನೀಡುವಂತೆ ಸೂಚಿಸಿದರು ಎಂದು ನೆನಪಿಸಿಕೊಂಡಿದ್ದಾರೆ ಖ್ಯಾತ ನಟಿ ಕತ್ರಿನಾ.