Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಮ್ಮ ಬಾಯಲ್ಲಿ ಪದೇ ಪದೆ ಹುಣ್ಣಾಗುತ್ತದೆಯೇ ಹಾಗಾದ್ರೆ ಮನೆ ಮದ್ದು ಇಲ್ಲಿದೆ.!

 

ಬಾಯಲ್ಲಿ ಹುಣ್ಣು ಆದರೆ ಏನೂ ತಿನ್ನಲು ಆಗುವುದಿಲ್ಲ. ಆ ಒಂದು ಚಿಕ್ಕ ಗಾಯ ನಮಗೆ ಏನನ್ನೂ ತಿನ್ನಲು ಬಿಡುವುದಿಲ್ಲ. ಬಾಯಿ ಹುಣ್ಣಿಗೆ ಅನೇಕ ಕಾರಣಗಳಿವೆ. ಹೊಟ್ಟೆ ಸಮಸ್ಯೆ ಇದ್ದರೆ ಅಥವಾ ರಕ್ತ ಕೆಟ್ಟರೆ ಅಥವಾ ದೇಹ ಹೆಚ್ಚು ಊಷ್ಣವಾದರೆ ಹೀಗೆ ಬಾಯಲ್ಲಿ ಗುಳ್ಳೆ ಅಥವಾ ಹುಣ್ಣಾಗುತ್ತದೆ. ಈ ಸಮಸ್ಯೆಗೆ ಕೆಲ ಮನೆಮದ್ದುಗಳಿವೆ.

ಹೆಚ್ಚು ಪೋಷಕಾಂಶಯುಕ್ತ ಆಹಾರ ಸೇವಿಸಬೇಕು. ಸಮತೋಲನ ಆಹಾರ ಸೇವಿಸಿದರೆ ಹುಣ್ಣಿನ ಸಮಸ್ಯೆ ಕಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗು ಹೆಚ್ಚು ಹೆಚ್ಚು ನೀರು ಕುಡಿಯಬೇಕು.

ವಿಟಮಿನ್‌ ಕೊರತೆ ಇದ್ದರೆ ಹೀಗೆ ಪದೇ ಪದೇ ಬಾಯಿ ಹುಣ್ಣು ಉಂಟಾಗುತ್ತದೆ. ಹಾಗಾಗಿ ವಿಟಮಿನ್‌ ಬಿ 12 ಬಿ1, ಕಬ್ಬಿನಾಂಶ ಹೆಚ್ಚಿರುವ ಆಪಾರಗಳನ್ನು ಹೆಚ್ಚು ಸೇವಿಸಬೇಕು. ದ್ರಾಕ್ಷಿ ,ಕಿತ್ತಳೆ ಇದಕ್ಕೆ ಸೂಕ್ತವಾದ ಹಣ್ಣು. ಬೆಳಗ್ಗೆ ಹಲ್ಲುಜ್ಜಿದ ಮೇಲೆ ಎರಡು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತು ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು.

ತುಳಸಿ ಆಂಟಿ ಬ್ಯಾಕ್ಟೀರಿಯಾ ಹಾಗು ಆಂಟಿ ವೈರಲ್‌ ಆಗಿ ಕೆಲಸ ಮಾಡುತ್ತಿದೆ. ಇದರ ಸೇವನೆಯಿಂದ ಅನೇಕ ರೋಗಗಳನ್ನು ತಡಯಬಹುದು. ಹೀಗಾಗಿ ಆಗಾಗ ತುಳಸಿ ಎಲೆಗಳನ್ನು ಚೆನ್ನಾಗಿ ಅಗೆದು ಸೇವಿಸಿದರೆ ಬಾಯಿ ಹುಣ್ಣು ಆಗೋದನ್ನು ತಡೆಯಬಹುದು. ಇದು ದೇಹಕ್ಕೆ ರೋಗನಿರೋಶಕ ಶಕ್ತಿಯನ್ನು ನೀಡುತ್ತದೆ.

ಅರಿಶಿನ ಪುಡಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಕಲಿಸಿ ಪೇಸ್ಟ್‌ ಹದಕ್ಕೆ ಮಾಡಿಕೊಂಡು ಬಾಯಲ್ಲಿ ಹುಣ್ಣಾಗಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಇದು ನಂಜು ನಿರೋಧಕ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಗು ಹುಣ್ಣು ಬೇಗನೇ ವಾಸಿಯಾಗುತ್ತದೆ.

ಬಾಯಲ್ಲಿ ಹುಣ್ಣು ಆದಾಗ ಅದರ ಸೊಂಕು ಕೂಡು ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಬಾಯಲ್ಲಿ ಹುಣ್ಣಾದರೆ ಹೈಡ್ರೋಜನ್‌ ಪೆರಾಕ್ಸೈಡ್‌ ನಿಂದ ಬಾಯಿ ಮುಕ್ಕಳಸಿ. ಹೀಗೆ ಮಾಡಿದರೆ ಸೋಂಕು ಹರಡೋದು ಕಡಿಮೆಯಾಗುತ್ತದೆ.